Wednesday, 18th September 2024

ರೈಲು ಹರಿದು ತಾಯಿ, ಮಗಳು ಸೇರಿ ಮೂವರ ಸಾವು

ಬೊಂಗೈಗಾಂವ್: ಅಸ್ಸೋಂದ ಬೊಂಗೈಗಾಂವ್​ ಜಿಲ್ಲೆಯಲ್ಲಿ ಗುರುವಾರ ರೈಲು ಹರಿದು ತಾಯಿ ಮತ್ತು ಮಗಳ ಸೇರಿದಂತೆ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

ಮೃತರನ್ನು ಕಲ್ಪನಾ ಬರ್ಮನ್, ಆಕೆಯ ಪುತ್ರಿ ಪ್ರಿಯಾ ಬರ್ಮನ್ (11) ಮತ್ತು ಮತ್ತೊಬ್ಬ ಮಹಿಳೆಯನ್ನು ಮುನ್ನಾ ಎಂದು ಗುರುತಿಸಲಾಗಿದೆ.

ಬೊಂಗೈಗಾಂವ್-ಚಪ್ರಕಟ ರೈಲು ನಿಲ್ದಾಣದ ನಡುವಿನ ನೊವಾಪಾರಾ-2 ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಹಿಳೆಯರಿಗೆ ವೇಗವಾಗಿ ಬಂದ ಗುವಾಹಟಿ – ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ 11 ವರ್ಷದ ಪ್ರಿಯಾ ಸೇಮತ ಮೂವರು ಸಾವನ್ನಪ್ಪಿದ್ದಾರೆ.

ರೈಲ್ವೆ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆಯೋ ಅಥವಾ ಬೇರೆ ಕಾರಣದಿಂದ ನಡೆದಿದೆಯೋ ಎಂಬ ಕುರಿತು ನಿಖರ ಇನ್ನೂ ತಿಳಿದುಬಂದಿಲ್ಲ. ರೈಲ್ವೆ ಪೊಲೀಸರು ಹಾಗೂ ಬೋಂಗೈಗಾಂವ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳೆದ ಅಕ್ಟೋಬರ್​ನಲ್ಲಿ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಇದೇ ರೀತಿಯಾದ ರೈಲು ಅಪಘಾತದ ಘಟನೆ ನಡೆದಿತ್ತು.

Leave a Reply

Your email address will not be published. Required fields are marked *