Thursday, 28th November 2024

Attack on ED : ರೇಡ್‌ ನಡೆಸಲು ಹೋಗಿದ್ದ ED ಅಧಿಕಾರಿಗಳ ಮೇಲೆಯೇ ಅಟ್ಯಾಕ್‌! ಒಬ್ಬ ಅಧಿಕಾರಿಗೆ ಗಾಯ

Attack on ED

ನವದೆಹಲಿ: ನೈರುತ್ಯ ದೆಹಲಿಯ (Delhi) ಬಿಜ್ವಾಸನ್‌ನಲ್ಲಿ ಸೈಬರ್ ವಂಚನೆ (Cyber Crime) ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಅರೋಪಿಗಳು ಹಲ್ಲೆಗೆ ಯತ್ನಸಿದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ಅಧಿಕಾರಿ ಗಾಯಗೊಂಡಿದ್ದಾರೆ (Attack on ED).

ಇಡಿ ತಂಡ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಮೇಲೆ ದಾಳಿ ಮಾಡಲು ಫಾರ್ಮ್‌ಹೌಸ್‌ಗೆ ತೆರಳಿತ್ತು. ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳಾದ ಅಶೋಕ್ ವರ್ಮಾ ಮತ್ತು ಆತನ ಸಹೋದರ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇಡಿಯ ಹೆಚ್ಚುವರಿ ನಿರ್ದೇಶಕರೊಬ್ಬರು ಗಾಯಗೊಂಡಿದ್ದಾರೆ. ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಇಡಿ ಮೂಲಗಳು ತಿಳಿಸಿವೆ. ದಾಳಿಯ ಸಂದರ್ಭದಲ್ಲಿ ಅಧಿಕಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಹಣಕಾಸು ಗುಪ್ತಚರ ಘಟಕದಿಂದ (ಎಫ್‌ಐಯು) ಇಡಿ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲಾಗಿದೆ ಮತ್ತು ಈ ಕಾರ್ಡ್‌ಗಳನ್ನು ಬಳಸಿಕೊಂಡು ಯುಎಇ ಮೂಲದ ಪಿವೈಪಿಎಲ್ ಪೇಮೆಂಟ್ ಅಗ್ರಿಗೇಟರ್‌ನಲ್ಲಿ ಟಾಪ್-ಅಪ್ ವರ್ಚುವಲ್ ಖಾತೆಗಳಿಗೆ ಹಣವನ್ನು ರವಾನೆ ಮಾಡಲಾಗಿದೆ, ಕ್ರಿಪ್ಟೋಕರೆನ್ಸಿ ಖರೀದಿಸಲು ಪೈಪಿಎಲ್‌ನಿಂದ ಹಣವನ್ನು ಬಳಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಇಡೀ ನೆಟ್‌ವರ್ಕ್ ಅನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ನಡೆಸುತ್ತಿದ್ದಾರೆ ಮತ್ತು ಹುಡುಕಾಟ ಇನ್ನೂ ನಡೆಯುತ್ತಿವೆ ಎಂದು ಇಡಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : Drugs Seized: ಮನೆ ಎದುರೇ ಡ್ರಗ್ಸ್‌ನಿಂದಲೇ ನಿರ್ಮಿಸಿರೋ ಮೂರ್ತಿ ನಿರ್ಮಾಣ! ರೇಡ್‌ ಮಾಡೋಕೆ ಬಂದ ಪೊಲೀಸರೇ ಶಾಕ್