ಚೆನ್ನೈ: ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಐಎಡಿಎಂಕೆ ಸಂಯೋಜಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಓ ಪನ್ನೀರ ಸೆಲ್ವಂ ಮೇಲೆ ಬಾಟಲಿಗಳಿಂದ ದಾಳಿ ನಡೆಸಿದ್ದು ಬೆಳಕಿಗೆ ಬಂದಿದೆ.
ಶ್ರೀವಾರು ವೆಂಕಟಾಚಲಪತಿ ಪ್ಯಾಲೇಸ್ ನಲ್ಲಿ ನಡೆದ ಸಭೆಯಲ್ಲಿ ಘಟನೆ ನಡೆದಿದೆ. ಪನ್ನೀರ್ ಸೆಲ್ವಂ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದಿದ್ದಾರೆ. ಎಐಎಡಿಎಂಕೆ ಸಭೆಯಲ್ಲಿ ಹೈ ಡ್ರಾಮಾ ನಡೆದಿದ್ದು, ಏಕ ನಾಯಕತ್ವಕ್ಕಾಗಿ ಸದಸ್ಯರ ಬೇಡಿಕೆ ಚರ್ಚಿಸಲು ಜುಲೈ 11 ರಂದು ಪಕ್ಷದ ಸಾಮಾನ್ಯ ಮಂಡಳಿ ಸಭೆಯನ್ನು ಕರೆಯುವುದಾಗಿ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುರುವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿಎಐಎಡಿಎಂಕೆ ಪ್ರೆಸಿಡಿಯಂ ಅಧ್ಯಕ್ಷರಾಗಿ ಅಮಿಲ್ ಮಗನ್ ಹುಸೇನ್ ಅವರನ್ನು ಆಯ್ಕೆ ಮಾಡಲಾಯಿತು. ಅವರು ಇಲ್ಲಿಯವರೆಗೆ ಹಂಗಾಮಿ ಪ್ರೆಸಿಡಿಯಂ ಅಧ್ಯಕ್ಷರಾಗಿದ್ದರು.