ನವದೆಹಲಿ: ಖ್ಯಾತ ಶಿಕ್ಷಣತಜ್ಞ ಮತ್ತು ಭಾಷಣಕಾರ ಅವಧ್ ಓಜಾ (Avadh Ojha) ಅವರು ಸೋಮವಾರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡರು. ಮಾಜಿ ಸಿಎಂ ಮತ್ತು ಆಮ್ ಆದ್ಮಿ (Aam Admi Party) ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ಮನೀಷ್ ಸಿಸೋಡಿಯಾ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.
Welcome to the AAP family Avadh Ojha Sir .
— Vishesh Ravi (@iamVisheshravi) December 2, 2024
दिल्ली में @ArvindKejriwal जी की शिक्षा क्रांति से प्रभावित होकर आज देश के प्रख्यात शिक्षक अवध ओझा जी ने आम आदमी पार्टी की सदस्यता ली। pic.twitter.com/T8AFvx9xY6
ಆಪ್ನ ಪ್ರಾಥಮಿಕ ಸದಸ್ಯತ್ವವನ್ನು ಪಡೆದ ನಂತರ, ಅವಧ್ ಓಜಾ ಅವರು ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಶಿಕ್ಷಣದ ಅಭಿವೃದ್ಧಿಗಾಗಿ ಕೆಲಸ ಮಾಡಲು ಅವಕಾಶ ನೀಡಿದ ಕೇಜ್ರಿವಾಲ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿರುವ ಅವರು ಶಿಕ್ಷಣವು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಆತ್ಮವನ್ನು ರೂಪಿಸುವ ಮಾಧ್ಯಮವಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಮಹಾನ್ ರಾಷ್ಟ್ರಗಳು ಮತ್ತು ನಾಯಕರು ಶಿಕ್ಷಣವನ್ನು ಮೂಲ ಅಡಿಪಾಯವನ್ನಾಗಿ ಹೊಂದಿದ್ದಾರೆ. ನಾನು ಇಂದಿನಿಂದ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವ ಮೂಲಕ, ಶಿಕ್ಷಣದಲ್ಲಿ ಅಭಿವೃದ್ದಿ ತರುವುದು ನನ್ನ ಮೂಲ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
AAP की शिक्षा क्रांति को और मजबूत करेंगे प्रख्यात शिक्षक अवध ओझा जी🙏
— AAP (@AamAadmiParty) December 2, 2024
"राजनीति में आकर शिक्षा के विकास के लिए काम करना ही मेरा सर्वोत्तम उद्देश्य है" 📚💯
~ अवध ओझा जी pic.twitter.com/A8GTtw3mbz
ಈ ಹಿಂದೆ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಓಜಾ ಈಗ ಮುಂದಿನ ವರ್ಷ ಎಎಪಿ ಅಭ್ಯರ್ಥಿಯಾಗಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಕೇಳಿಬಂದಿದೆ.
ಓಜಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, “ಅವರ ಅನುಭವ ಮತ್ತು ದೃಷ್ಟಿಕೋನವು ನಮ್ಮ ಶಿಕ್ಷಣ ನೀತಿಗೆ ಹೊಸ ದಿಕ್ಕನ್ನು ಒದಗಿಸುತ್ತದೆ. ನಮ್ಮ ಕೆಲಸ ಮತ್ತು ನಾವು ಜಾರಿಗೊಳಿಸಿದ ಶಿಕ್ಷಣದ ನೀತಿಗಳಿಂದ ಪ್ರೇರಿತರಾಗಿ ಅವರು ಪಕ್ಷಕ್ಕೆ ಸೇರಿದ್ದಾರೆ. ಅವರನ್ನು ನಮ್ಮ ಪಕ್ಷಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಬಾಬಾ ಸಾಹೇಬರ ಕನಸುಗಳನ್ನು ನನಸು ಮಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಯಾವುದೇ ನಾಯಕನನ್ನು ಪಕ್ಷಕ್ಕೆ ಕರೆತಂದಾಗ, ಅವರ ಸೇರ್ಪಡೆಯು ಎಎಪಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾವು ಹೇಳುತ್ತೇವೆ. ಇಂದು, ಅವಧ್ ಓಜಾ ಅವರ ಸೇರ್ಪಡೆಯೊಂದಿಗೆ, ದೇಶದಲ್ಲಿ ಶಿಕ್ಷಣವು ಬಲಗೊಳ್ಳುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ. ಏಕೆಂದರೆ ಎಎಪಿ ಶಿಕ್ಷಣಕ್ಕಾಗಿ ಹೆಚ್ಚಿನ ಕೆಲಸವನ್ನು ಮಾಡುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅವಧ್ ಓಜಾ ಯಾರು?
ಅವಧ್ ಓಜಾ ಅವರು ದೇಶದ ಅತ್ಯಂತ ಮೆಚ್ಚುಗೆ ಪಡೆದ ಶಿಕ್ಷಕರಲ್ಲಿ ಒಬ್ಬರು ಹಾಗೂ ಶಿಕ್ಷಣತಜ್ಞ ಎಂದು ಗುರುತಿಸಿಕೊಂಡಿದ್ದಾರೆ. ಅವರ ಪೂರ್ಣ ಹೆಸರು ಅವಧ್ ಪ್ರತಾಪ್ ಓಜಾ. ಅವರು ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡುವುದರ ಮೂಲಕ ಜನಪ್ರಿಯರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ : AAP Leader Shot: ಆಪ್ ನಾಯಕನ ಮೇಲೆ ಅಕಾಲಿದಳ ಮುಖಂಡನಿಂದ ಫೈರಿಂಗ್; ಪಂಜಾಬ್ನಲ್ಲಿ ಭಾರೀ ಹೈಡ್ರಾಮಾ!