ತಿರುಪತಿ: ತಿರುಪತಿಯಲ್ಲಿ ವಿಶ್ವದರ್ಜೆಯ ಮೂಲಸೌಲಭ್ಯಗಳು ಮತ್ತು ಸಂಪನ್ಮೂಲ ಇರುವ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಜ್ಜಾಗಿದೆ.
ಆಯುರ್ವೇದದ ಪ್ರಾಚೀನ ವಿಜ್ಞಾನಕ್ಕೆ ಉತ್ತೇಜನ ನೀಡುವ ಮತ್ತು ಮತ್ತು ಮುನ್ನಡೆಸುವ ಮಹತ್ವದ ಕ್ರಮದ ಭಾಗವಾಗಿ ತಿರುಮಲ ತಿರುಪತಿ ದೇವ ಸ್ಥಾನವು (ಟಿಟಿಡಿ) ತಿರುಪತಿಯಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಪ್ರಕಟಿಸಿದೆ.
ಇತ್ತೀಚೆಗೆ ತಿರುಪತಿಯಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ (CME) ಕಾರ್ಯಕ್ರಮದ ಉದ್ಘಾಟನೆ ವೇಳೆ ತಿರುಮಲ ತಿರುಪತಿ ದೇವಸ್ಥಾನ (TTD) ಆರೋಗ್ಯ ಮತ್ತು ಶಿಕ್ಷಣದ ಜಂಟಿ ಕಾರ್ಯ ನಿರ್ವಾಹಕ ಅಧಿಕಾರಿ ಸದಾ ಭಾರ್ಗವಿ ವಿಶ್ವವಿದ್ಯಾನಿಲಯದ ಸ್ಥಾಪನೆ ಕುರಿತ ಯೋಜನೆಗಳನ್ನು ಅನಾ ವರಣಗೊಳಿಸಿದರು.
ಟಿಟಿಡಿ ಸ್ಥಾಪಿಸಲು ಉದ್ದೇಶಿಸಿರುವ ಭವಿಷ್ಯದ ಪ್ರಸ್ತಾವಿತ ಆಯುರ್ವೇದ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವ ಹೆಚ್ಚಿಸುವ ಜೊತೆಗೆ ಉನ್ನತ ದರ್ಜೆಯ ಸೌಲಭ್ಯಗಳು ಮತ್ತು ಸಂಪನ್ಮೂಲಗಳಡಿ ಕಲಿಯಲು ಅವಕಾಶ ಕಲ್ಪಿಸುತ್ತದೆ.
ಆಯುರ್ವೇದ ವಿಶ್ವಿವಿದ್ಯಾಲಯ ಸ್ಥಾಪನೆ ಕುರಿತು ಭಾರ್ಗವಿ ಅವರು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಸಹಮತ ನೀಡಿದರು. ಆದಷ್ಟು ಈ ಶೀಘ್ರವೇ ತಿರುಪತಿಯಲ್ಲಿ ನೂತನ ವಿಶ್ವವಿದ್ಯಾಲಯದ ಶಂಕು ಸ್ಥಾಪನೆ ನೆರವೇರಲಿದೆ.