Wednesday, 23rd October 2024

Baba Siddique murder : ಎನ್‌ಸಿಪಿ ನಾಯಕ ಸಿದ್ದಿಕಿ ಹತ್ಯೆ ಪ್ರಕರಣ; ಭದ್ರತಾ ಅಧಿಕಾರಿ ಅಮಾನತು

Baba Siddique murder

ಮುಂಬೈ : ಎನ್‌ಸಿಪಿ ಶಾಸಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ (Baba Siddique murder) ಪ್ರಕರಣ ಸಂಬಂಧ ಹತ್ಯೆ ನಡೆದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್‌(Police constable) ಶ್ಯಾಮ್ ಸೋನಾವಾನೆ ಅವರನ್ನು ಅಮಾನತುಗೊಳಿಸಲಾಗಿದೆ(Suspend). ಘಟನಾ ಸ್ಥಳದಲ್ಲಿ ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಚಾರಣೆಯ ವೇಳೆ ಕಾನ್ಸ್‌ಟೇಬಲ್‌ ಶ್ಯಾಮ್ ಸೋನಾವಾನೆ ಬಾಬಾ ಸಿದ್ಧಿಕಿ(Baba Siddique) ಅವರ ಮೇಲೆ ಗುಂಡಿನ ದಾಳಿ ನಡೆಯುವಾಗ ತಕ್ಷಣವೇ ಧಾವಿಸಲು ಸಾಧ್ಯವಾಗಲಿಲ್ಲ. ಅಲ್ಲಿ ಪಟಾಕಿ ಸಿಡಿದಿದ್ದರಿಂದ ಸಿದ್ದಿಕ್ ಅವರ ಮೇಲೆ ದಾಳಿ ನಡೆಯುತ್ತಿದೆ ಎಂಬುದು ತಿಳಿಯಲಿಲ್ಲ ಹಾಗೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಎಂದು ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್‌ 12 ರ ರಾತ್ರಿ 9.30 ರ ವೇಳೆಗೆ ಬಾಬಾ ಸಿದ್ದಿಕಿ ಮುಂಬೈನ ಬಾಂದ್ರಾದಲ್ಲಿರುವ ಮಗ ಶಾಸಕ ಜೀಶಾನ್ ಸಿದ್ದಿಕಿ ಅವರ ಕಚೇರಿಯಿಂದ ಹೊರಟಿದ್ದರು. ದಸರಾ ಮೆರವಣಿಗೆಯ ಸದ್ದು ಹಾಗೂ ಜನಜಂಗುಳಿಯ ಇತ್ತು. ಸಿದ್ದಿಕಿಗಾಗಿ ಕಾಯುತ್ತಾ ಇದ್ದ ಕಾರಿನ ಸಮೀಪವೇ ಇದ್ದ ಹಂತಕರು, ಅವರು ಕಾರಿನ ಒಳಗೆ ಕೂರಲು ಹೋಗುವಾಗ ಗಾಢ ಹೊಗೆ ಬರುವ ಪಟಾಕಿ ಉರಿಸಿದ್ದರು. ಹೆಚ್ಚಿನವರು ಅದನ್ನು ಪಟಾಕಿಯ ಹೊಗೆ ಎಂದೇ ಭಾವಿಸಿದ್ದರು.

ಪಟಾಕಿ ಸದ್ದಿನಲ್ಲಿ ಗುಂಡೇಟಿನ ಸದ್ದು ಕೇಳಿಸಿರಲಿಲ್ಲ. ಅಷ್ಟರಲ್ಲಿ ಸಿದ್ದಿಕಿಗೆ ಗುಂಡು ತಗುಲಿತ್ತು, ಸಿದ್ದಿಕಿ ಅವರ ಎದೆ ಹಾಗೂ ಹೊಟ್ಟೆಗೆ ನಾಲ್ಕು ಗುಂಡುಗಳನ್ನು ಹಾರಿಸಲಾಗಿತ್ತು. ಅವರ ಸಹಾಯಕ ಒಬ್ಬನಿಗೂ ಗುಂಡೇಟು ತಗುಲಿದ್ದು ಗಾಯವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ಹತ್ಯೆ ಹೊಣೆ ಹೊತ್ತುಕೊಂಡಿದೆ. ಇದಕ್ಕಾಗಿ 25 ಕೋಟಿ ರೂ ಸುಪಾರಿ ನೀಡಿದ್ದಾಗಿ ಹೇಳಿದೆ. ಬಾಬಾ ಸಿದ್ದಕಿ ಹಾಗೂ ನಟ ಸಲ್ಮಾನ್ ಖಾನ್ ಆಪ್ತರಾಗಿದ್ದು, ಸಲ್ಮಾನ್ ಖಾನ್‌ಗೂ ಈಗಾಗಲೇ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದೆ.

ಇದನ್ನೂ ಓದಿ : Baahubali 3 : ಬಾಹುಬಲಿ 3ಕ್ಕೆ ಪ್ರಭಾಸ್‌, ರಾಜಮೌಳಿ ರೆಡಿ! ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ದೇಶಕ

ಸಲ್ಮಾನ್‌ ಖಾನ್‌ಗೆ ಲಾರೆನ್ಸ್‌ ಬಿಷ್ಣೋಯಿ ಹಾಗೂ ಗ್ಯಾಂಗ್‌ ನಿರಂತರವಾಗಿ ಬೆದರಿಕೆ ಹಾಕುತ್ತಾ ಬಂದಿದ್ದು, ಸಲ್ಮಾನ್‌ ಬಿಷ್ಣೋಯಿ ಸಮಾಜದ ದೇವರ ಸಮಾನ ಎಂದು ಪೂಜಿಸುವ ಕೃಷ್ಣ ಮೃಗ ಬೇಟೆಯಾಡಿದ್ದಾರೆ ಎಂಬ ಆರೋಪವಿದೆ. ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ . ಇದೇ ಕಾರಣಕ್ಕೆ ಲಾರೆನ್ಸ್‌ ಸಲ್ಮಾನ್ ಹತ್ಯೆಗೆ ಯತ್ನಿಸುತ್ತಿದ್ದಾನೆ ಎನ್ನಲಾಗಿದೆ. ಅಲ್ಲಿಂದ ಇಲ್ಲಿವರೆಗೆ ಹಲವು ಬಾರಿ ಜೀವ ಬೆದರಿಕೆ ಬಂದಿದ್ದು, ಸಲ್ಮಾನ್‌ ಮನೆ ಮೇಲೆ ಗುಂಡಿನ ದಾಳಿ ಕೂಡಾ ನಡೆದಿತ್ತು. ಸಲ್ಮಾನ್‌ ಖಾನ್‌ಗೆ ಇದೀಗ ವೈ ಪ್ಲಸ್‌ ಭದ್ರತೆ ಒದಗಿಸಲಾಗಿದೆ. ಪೋ‌ಲೀಸ್‌ ಬೆಂಗಾವಲು ವಾಹನವನ್ನು ನಿಯೋಜಿಸಲಾಗಿದೆ. ಬೆದರಿಕೆ ಸಂದೇಶದ ತನಿಖೆ ಕೈಗೆತ್ತಿಕೊಂಡಿರುವ ಮುಂಬೈ ಪೋಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸಲ್ಮಾನ್‌ ಖಾನ್‌ ತಮ್ಮ ಆತ್ಮ ರಕ್ಷಣೆಗಾಗಿ ಈಗಾಗಲೇ ದುಬೈನಿಂದ ವಿಶೇಷ ಬುಲೆಟ್‌ ಫ್ರೂಪ್‌ ಕಾರನ್ನು ತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ನಡೆದ ಬಿಗ್‌ ಬಾಸ್‌ 18 ರ ಆವೃತ್ತಿಯ ಶೂಟಿಂಗ್‌ಗೂ ಕೂಡ ಹೈ ಸೆಕ್ಯುರಿಟಿಯೊಂದಿಗೆ ಸಲ್ಲು ಆಗಮಿಸಿದ್ದರು.