ಜಿಮ್‍ಗೆ ಹೋಗುವವರು ಹೆಚ್ಚಾಗಿ ತಮ್ಮ ಫಿಟ್‍ನೆಸ್ ಹೆಚ್ಚಿಸಲು ಪ್ರೋಟೀನ್ ಪೌಡರ್, ಪ್ರೋಟೀನ್ ಮಿಲ್ಕ್‌ಶೇಕ್‍ಗಳನ್ನು ವ್ಯಾಯಾಮಕ್ಕೂ ಮುನ್ನ ಸೇವಿಸುತ್ತಾರೆ. ಈ ಪೂರಕಗಳು ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದ್ದರೂ, ಅವುಗಳು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಪ್ರೋಟೀನ್ ಪಾನೀಯಗಳು ಅನೇಕ ಜನರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಏಕೆಂದರೆ ಅವು ಕರುಳಿನ ಚಲನೆ, ತಲೆನೋವು, ಆಲಸ್ಯ, ಉಬ್ಬರ, ಮೊಡವೆ, ವಾಕರಿಕೆ ಮತ್ತು ಬಾಯಾರಿಕೆಗೆ ಕಾರಣವಾಗಬಹುದು. ಪರಿಣಾಮಕಾರಿಯಾದ, ಶಕ್ತಿಯನ್ನು ಹೆಚ್ಚಿಸುವ, ಸಾಕಷ್ಟು ಪ್ರಮಾಣದ ಪ್ರೋಟೀನ್ ಹೊಂದಿರುವ ಮತ್ತು ಹಾಗಾಗಿ ಯಾವುದೇ ನಕಾರಾತ್ಮಕ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕವಾದ ಪಾನೀಯಗಳನ್ನು ನೀವು ಹುಡುಕುತ್ತಿದ್ದರೆ ಪೌಷ್ಟಿಕತಜ್ಞರು ತಿಳಿಸಿದ ಈ ಪಾನೀಯ(Beetroot Juice) ಸೇವಿಸಿ.
ಮನೆಯಲ್ಲಿ ಈ ಜ್ಯೂಸ್ ತಯಾರಿಸಬಹುದು. ಅದಕ್ಕಾಗಿ ನೀವು ಬೀಟ್ರೂಟ್ ತೆಗದುಕೊಂಡು ತೊಳೆದು ಸಿಪ್ಪೆ ತೆಗೆದು ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಸ ತೆಗೆದು ನಂತರ, ಒಂದು ಚಮಚ ವರ್ಜಿನ್ ತೆಂಗಿನ ಎಣ್ಣೆಯನ್ನು ಮಿಶ್ರಣಕ್ಕೆ ಸೇರಿಸಿ ಕುಡಿಯಿರಿ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ, ವ್ಯಾಯಾಮದ ಸಮಯದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಆಮ್ಲಜನಕವನ್ನು ನೀಡುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಬೀಟ್ರೂಟ್ ರಸ ವ್ಯಾಯಾಮಕ್ಕೂ ಮುನ್ನ ಸೇವಿಸುವುದರಿಂದ ಪ್ರಯೋಜನಕಾರಿಯೇ ಎಂಬುದಕ್ಕೆ ಸಂಶೋಧನೆ ನಡೆಸಲಾಗಿತ್ತು. ಈ ಅಧ್ಯಯನದಲ್ಲಿ, ಸಂಶೋಧಕರು ಎರಡು ಗುಂಪುಗಳನ್ನು ಮಾಡಿ ಅದರಲ್ಲಿ ಒಂದು ಗುಂಪು ಬೀಟ್ರೂಟ್ ರಸವನ್ನು ಕುಡಿದರೆ, ಇನ್ನೊಂದು ಗುಂಪು ಅದನ್ನು ಕುಡಿಯಲಿಲ್ಲ. ಆದರೆ ಬೀಟ್ರೂಟ್ ರಸವನ್ನು ಕುಡಿಯದ ಗುಂಪಿನವರಿಗಿಂತ, ಈ ರಸ ಕುಡಿದ ಗುಂಪಿವನವರಲ್ಲಿ ಗಮನಾರ್ಹವಾಗಿ ಸುಧಾರಿತ ಆಮ್ಲಜನಕದ ದಕ್ಷತೆಯನ್ನು ತೋರಿಸಿತು ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಿತು. ಅಲ್ಲದೇ ಆಮ್ಲಜನಕವನ್ನು ಸಾಗಿಸುವ ರಕ್ತದ ಸಾಮರ್ಥ್ಯವನ್ನು ಹೆಚ್ಚಿಸಿತು. ಜೊತೆಗೆ ಬೀಟ್ರೂಟ್ ರಸವನ್ನು ಕುಡಿಯುವುದು ಅವರ ಶಕ್ತಿ ಉತ್ಪಾದನೆ ಹೆಚ್ಚಾಗಿ ಅದರಿಂದ ಪ್ರಯೋಜನ ಪಡೆದಿದ್ದಾರೆ.
ಬೀಟ್ರೂಟ್ ರಸ ಕುಡಿಯುವುದರಿಂದಾಗುವ ಇತರ ಪ್ರಯೋಜನಗಳು:
ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ:
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದವರಿಗೆ ಇದು ಪ್ರಯೋಜನಕಾರಿಯಾಗಿದೆ. ಬೀಟ್ರೂಟ್ ರಸವು ಹೆಚ್ಚಿನ ಪ್ರಮಾಣದ ನೈಟ್ರಿಕ್ ಆಕ್ಸೈಡ್ ಅನ್ನು ಹೊಂದಿರುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸುವ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಶಕ್ತಿಯನ್ನು ಹೆಚ್ಚಿಸುತ್ತದೆ:
ಬೀಟ್ರೂಟ್ ಜ್ಯೂಸ್ನಲ್ಲಿ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ:ನಿತ್ಯ ಎರಡು ಮಹಡಿಗಳ ಮೆಟ್ಟಿಲುಗಳನ್ನು ಹತ್ತಿದರೆ ದೇಹದ ಮೇಲೆ ಅದ್ಭುತ ಪರಿಣಾಮ!
ಚರ್ಮಕ್ಕೆ ಒಳ್ಳೆಯದು:
ಬೀಟ್ರೂಟ್ ಜ್ಯೂಸ್ನಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಶುಷ್ಕ ಮತ್ತು ಒಣಗಿದ ಚರ್ಮವನ್ನು ಹೊಂದಿದ್ದರೆ, ನಿಮ್ಮ ಆಹಾರದಲ್ಲಿ ಬೀಟ್ರೂಟ್ ರಸವನ್ನು ಸೇರಿಸಿಕೊಳ್ಳಬಹುದು.