Thursday, 12th December 2024

Best Cities: ಭಾರತದ ಈ 7 ನಗರಗಳು ನಿವೃತ್ತರ ಸ್ವರ್ಗ!

Best Cities

ನಿವೃತ್ತಿ (retirement) ಬಳಿಕ ಸುಖವಾಗಿ, ನೆಮ್ಮದಿಯಾಗಿ ಬೇರೆ ನಗರದಲ್ಲಿ (town) ಹೋಗಿ ವಾಸಿಸಬೇಕು ಎಂದು ಕನಸು ಕಾಣುವವರು ನೀವಾಗಿದ್ದರೆ ಕೈಗೆಟಕುವ ದರದಲ್ಲಿ ಎಲ್ಲ ಅಗತ್ಯ ಸೌಕರ್ಯಗಳು ಲಭ್ಯವಾಗುವ ಕೆಲವು ನಗರಗಳು (Best Cities ) ನಮ್ಮ ದೇಶದಲ್ಲಿವೆ. ಯಾವುದೇ ಆರ್ಥಿಕ ಒತ್ತಡವನ್ನು ನೀಡದೆ ನೆಮ್ಮದಿಯಾಗಿ ಬದುಕಲು ಈ ನಗರಗಳು ಅವಕಾಶ ಕಲ್ಪಿಸಿಕೊಡುತ್ತವೆ. ಅಂಥ ಕೆಲವು ಉತ್ತಮ ನಗರಗಳ ಮಾಹಿತಿ ಇಲ್ಲಿದೆ.

Best Cities

 

ಪುಣೆ

ಆಧುನಿಕ ಜೀವನ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಪೂರ್ಣ ಮಿಶ್ರಣವನ್ನು ನೀಡುವ ಮಹಾರಾಷ್ಟ್ರದ ಪುಣೆ ನಿವೃತ್ತಿ ಬಳಿಕ ನೆಲೆಸಲು ಉತ್ತಮ ನಗರವಾಗಿದೆ. ಅತ್ಯುತ್ತಮ ಸಾರಿಗೆ ಆಯ್ಕೆಗಳನ್ನು ಇದು ಹೊಂದಿದೆ. ಹಲವಾರು ಅತ್ಯಾಧುನಿಕ ಸೌಲಭ್ಯವಿರುವ ಆಸ್ಪತ್ರೆಗಳು ಇಲ್ಲಿವೆ.

ಹಚ್ಚ ಹಸಿರಿನ ಭೂದೃಶ್ಯ, ವಿಶಾಲವಾದ ರಸ್ತೆ, ಸೂಕ್ತವಾದ ಹವಾಮಾನ ನಿವೃತ್ತಿಯ ಅನಂತರದ ಜೀವನಕ್ಕೆ ಸೂಕ್ತವಾಗಿದೆ.

Best Cities

ಚಂಡೀಗಢ

ಪಂಜಾಬ್‌ನಲ್ಲಿದೆ ಭಾರತದ ಮೊದಲ ಯೋಜಿತ ನಗರ ಚಂಡೀಗಢ. ದೇಶದ ಉತ್ತರ ಭಾಗದಲ್ಲಿರುವ ಈ ನಗರವು ನಿವೃತ್ತರಿಗೆ ಸ್ವರ್ಗವಾಗಿದೆ. ಆಹ್ಲಾದಕರ ಹವಾಮಾನ, ಉನ್ನತ ದರ್ಜೆಯ ಸೌಕರ್ಯಗಳು ಇಲ್ಲಿವೆ. ಭಾರತದ ರಾಜಧಾನಿ ನವದೆಹಲಿಯಿಂದ ಕೆಲವೇ ಗಂಟೆಗಳ ದೂರದಲ್ಲಿದೆ. ಸುಂದರವಾದ ಹಿಮಾಲಯ ಗಿರಿಧಾಮಗಳಿಗೆ ಹೋಗ ಬಯಸುವ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಚಂಡೀಗಢವು ಒದಗಿಸಿಕೊಡುತ್ತದೆ.

Best Cities

ಕೊಯಮತ್ತೂರು

ಕೊಯಮತ್ತೂರು ತಮಿಳುನಾಡು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ. ದಕ್ಷಿಣದ ಕೆಳಗೆ ನೀಲಗಿರಿಯಲ್ಲಿ ನೆಲೆಸಿರುವ ಇದು ಆಹ್ಲಾದಕರ ಹವಾಮಾನ ಮತ್ತು ಶುದ್ಧ ಗಾಳಿಯನ್ನು ಹೊಂದಿದೆ. ಇದು ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅತ್ಯುತ್ತಮ ಸಂಪರ್ಕ ಆಯ್ಕೆಗಳನ್ನು ಸಹ ನೀಡುತ್ತದೆ.
ಯಾವುದೇ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಇಲ್ಲಿ ಆಸ್ಪತ್ರೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾಕೆಂದರೆ ನಗರದಾದ್ಯಂತ ವಿವಿಧ ಆಸ್ಪತ್ರೆಗಳನ್ನು ಕಾಣಬಹುದು.

Best Cities

ಡೆಹ್ರಾಡೂನ್

ಸುಂದರ ಪರ್ವತಗಳು, ಸರಳ ಜೀವನಶೈಲಿ ಮತ್ತು ರಮಣೀಯ ಭೂದೃಶ್ಯಗಳು ಇಷ್ಟವಾಗಿದ್ದರೆ ನಿವೃತ್ತಿಯ ಬಳಿಕ ಸಮಯ ಕಳೆಯಲು ಉತ್ತರಾಖಂಡದ ಡೆಹ್ರಾಡೂನ್ ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ದೀರ್ಘ ನಡಿಗೆಗಳನ್ನು ನಡೆಸಬಹುದು, ವಿವಿಧ ಗಿರಿಧಾಮಗಳಿಗೆ ದಿನದ ಪ್ರವಾಸಗಳನ್ನು ಆನಂದಿಸಬಹುದು. ಉತ್ತಮ ರಿಯಲ್ ಎಸ್ಟೇಟ್ ಆಯ್ಕೆಗಳು, ಆರೋಗ್ಯ ರಕ್ಷಣೆ ಮತ್ತು ದೇಶದಾದ್ಯಂತ ಸಾರಿಗೆ ಸಂಪರ್ಕ ಆಯ್ಕೆಗಳನ್ನು ಇದು ಹೊಂದಿದೆ.

Best Cities

ಧರ್ಮಶಾಲಾ

ಹಿಮಾಚಲ ಪ್ರದೇಶದಲ್ಲಿ ನೆಲೆಗೊಂಡಿರುವ ಈ ನಗರವು ನಿಸರ್ಗ ಪ್ರೇಮಿಗಳಿಗೆ ಉತ್ತಮ ಆಯ್ಕೆಯಾಗಿದೆ. ಸುಂದರವಾದ ಮಠಗಳು ಮತ್ತು ಭೂದೃಶ್ಯಗಳಿಂದಾಗಿ ಇದು ಯಾವಾಗಲೂ ಪ್ರವಾಸಿಗರನ್ನು ಸೆಳೆಯುತ್ತದೆ. ದಲೈ ಲಾಮಾ ಅವರ ನೆಲೆಯಾಗಿರುವ ಈ ನಗರವು ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ಅಗ್ಗವಾಗಿದೆ.

Best Cities

ಜೈಪುರ

ರಾಜಸ್ಥಾನದಲ್ಲಿರುವ ಪಿಂಕ್ ಸಿಟಿ ಎಂದೂ ಕರೆಯಲ್ಪಡುವ ಜೈಪುರ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ನಿವೃತ್ತಿಯ ಅನಂತರ ವಾಸಿಸುವ ನಗರವಾಗಿಯೂ ಇದು ಜನಪ್ರಿಯತೆಯನ್ನು ಗಳಿಸುತ್ತಿದೆ. ಅತ್ಯುತ್ತಮ ವಸತಿ ಆಯ್ಕೆಗಳು, ಆರೋಗ್ಯ ಮತ್ತು ಸಾರಿಗೆಯಂತಹ ಅಗತ್ಯ ಸೌಕರ್ಯಗಳನ್ನು ಇದು ಒದಗಿಸುತ್ತದೆ.

ಇಲ್ಲಿ ಸುಂದರವಾದ ಕೋಟೆಗಳು, ವಸ್ತು ಸಂಗ್ರಹಾಲಯಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಬಹುದು. ಬೇಸರವಿಲ್ಲದೆ ನಿವೃತ್ತಿಯ ಜೀವನವನ್ನು ಆನಂದಿಸಬಹುದು.

Best Cities

ಮೈಸೂರು

ಕರ್ನಾಟಕದಲ್ಲಿರುವ ಮೈಸೂರು ಸಹ ನಿವೃತ್ತಿ ಬಳಿಕ ಪರಿಗಣಿಸಲು ಉತ್ತಮ ಆಯ್ಕೆಯಾಗಿದೆ. ಈ ನಗರವು ಸ್ವಾತಂತ್ರ್ಯ ಪೂರ್ವದಿಂದಲೂ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಕೈಗೆಟುಕುವ ಬೆಲೆಯ ರಿಯಲ್ ಎಸ್ಟೇಟ್ ಆಯ್ಕೆಗಳು ಮತ್ತು ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಸಂಸ್ಥೆಗಳನ್ನು ಹೊಂದಿದೆ. ವಿವಿಧ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳು ಸಹ ನಗರದಾದ್ಯಂತ ವ್ಯಾಪಿಸಿದೆ. ಹಸಿರು ವಲಯವೂ ಇಲ್ಲಿ ಸಾಕಷ್ಟಿದೆ. ಹಾಗಾಗಿ ಮೈಸೂರು ನಗರ ನಿವೃತ್ತರ ಸ್ವರ್ಗ ಎನ್ನುವುದರಲ್ಲಿ ಎರಡು ಮಾತಿಲ್ಲ.

ನೆನಪಿಡಬೇಕಾದ ಸಂಗತಿಗಳು

ನಿವೃತ್ತಿಯ ಅನಂತರ ಬೇರೆ ನಗರಗಳಿಗೆ ವಾಸಿಸಲು ತೆರಳುವವರು ನೀವಾಗಿದ್ದರೆ ಕೆಲವೊಂದು ಅಂಶಗಳನ್ನು ಪರಿಗಣಿಸಬೇಕು.

ಜೀವನ ವೆಚ್ಚ

ನಗರವನ್ನು ಆಯ್ಕೆ ಮಾಡುವ ಮೊದಲು ಎಲ್ಲಾ ವೆಚ್ಚಗಳನ್ನು ಮನಬಂದಂತೆ ನಿರ್ವಹಿಸಲು ಸಾಧ್ಯವಾಗುತ್ತದೆಯೇ ಎಂದು ನಿರ್ಣಯಿಸಲು ಜೀವನ ವೆಚ್ಚವನ್ನು ಪರಿಶೀಲಿಸಿ. ನಿಮ್ಮ ಜೀವನಶೈಲಿಯ ಅಗತ್ಯತೆಗಳು ಮತ್ತು ಇತರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಧರಿಸಬೇಕು.

ಸಾರ್ವಜನಿಕ ಸಾರಿಗೆ

ನಗರದಲ್ಲಿ ನೆಲೆಸಲು ನಿರ್ಧರಿಸುವಾಗ ಪರಿಗಣಿಸಬೇಕಾದ ಅತ್ಯಗತ್ಯ ಅಂಶವೆಂದರೆ ಸಾರಿಗೆ. ಆಯ್ಕೆ ಮಾಡುವ ಸ್ಥಳವು ವಾಯು, ರಸ್ತೆ ಮತ್ತು ರೈಲು ಮೂಲಕ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸಲು ಅಗತ್ಯ ವ್ಯವಸ್ಥೆಗಳನ್ನು ಹೊಂದಿರಬೇಕು.

ವೈದ್ಯಕೀಯ ಸೌಲಭ್ಯಗಳು

ನಿವೃತ್ತಿಯ ಅನಂತರ ನೀವು ಮತ್ತು ನಿಮ್ಮ ಸಂಗಾತಿಯು ವಯಸ್ಸಿನ ಅಂಶದಿಂದಾಗಿ ಹೆಚ್ಚು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಗುರಿಯಾಗಬಹುದು. ಆದ್ದರಿಂದ, ನಿವೃತ್ತಿಯ ಅನಂತರ ಸ್ಥಳಾಂತರಗೊಳ್ಳಲು ಭಾರತೀಯ ನಗರವನ್ನು ಹುಡುಕುವಾಗ ಆ ಪ್ರದೇಶದಲ್ಲಿನ ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಿ.

ವಾಯು ಗುಣಮಟ್ಟ ಮತ್ತು ಹವಾಮಾನ

ವರ್ಷಪೂರ್ತಿ ನಗರದ ಹವಾಮಾನ ಮತ್ತು ಗಾಳಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಯಾಕೆಂದರೆ ಅತಿ ಬಿಸಿ ಅಥವಾ ತಣ್ಣನೆಯ ವಾತಾವರಣ ಕೆಲವರಿಗೆ ವಾಸಿಸಲು ಕಷ್ಟಕರವಾಗಬಹುದು.

ಅಪರಾಧ ದರ

ನಗರವು ವಾಸಿಸಲು ಯೋಗ್ಯವಾಗಿದೆಯೇ ಎಂದು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ಸುರಕ್ಷತೆ. ನಗರದ ಸರಾಸರಿ ಅಪರಾಧ ದರವನ್ನು ನಿರ್ಣಯಿಸಿ ಮತ್ತು ಅನಂತರ ನೆಲೆಗೊಳ್ಳಲು ನಿರ್ಧರಿಸಿ.

Brunei Sultan: ಸ್ವರ್ಣ ಲೇಪಿತ ಮಹಲು, ಖಾಸಗಿ ಜೆಟ್, ಕಾರುಗಳು; ಬ್ರೂನಿ ದೊರೆಯ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್‌ ಸಂಗತಿ

ಆದಾಯ

ಹೊಸ ನಗರಕ್ಕೆ ಶಿಫ್ಟ್ ಆಗುವುದು ಕೆಲವೊಮ್ಮೆ ದುಬಾರಿಯಾಗಬಹುದು. ಸ್ಥಿರ ಠೇವಣಿಯ ಮಾಸಿಕ ಬಡ್ಡಿ ಪಾವತಿಯ ಆಯ್ಕೆಯನ್ನು ಆರಿಸುವ ಮೂಲಕ ಮಾಸಿಕ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇದಕ್ಕಾಗಿ ಅತ್ಯುತ್ತಮ ಹೂಡಿಕೆಯ ಆಯ್ಕೆಯನ್ನು ಪರಿಗಣಿಸಬೇಕಾಗುತ್ತದೆ.