ಐಶ್ವರ್ಯಾ-ಅಭಿಷೇಕ್ (aishwarya rai – abhishek bachchan) ಅವರ ವಿಚ್ಛೇದನದ ವದಂತಿಗಳು ಜೋರಾಗಿವೆ. ಬಚ್ಚನ್ ಕುಟುಂಬದ ಜೊತೆಗೆ ಬರದೆ ಐಶ್ವರ್ಯಾ ಒಬ್ಬರೇ ಅನಂತ್ ಅಂಬಾನಿ ಅವರ ಮದುವೆಗೆ ಬಂದಾಗಿನಿಂದ ಐಶ್ವರ್ಯಾ- ಅಭಿಷೇಕ್ ಅವರ ಡಿವೋರ್ಸ್ ಸುದ್ದಿ ಶುರುವಾಯಿತು. ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಆ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪುಲ್ ಸ್ಟಾಪ್ ಇಟ್ಟಿದ್ದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ವದಂತಿಯ ಕುರಿತು ತಮ್ಮ ಬ್ಲಾಗ್ನಲ್ಲಿ (Big B Blog) ಸ್ಪಷ್ಟನೆಯನ್ನು ನೀಡಿದ್ದಾರೆ
‘ತಲಾಖ್’ಗೆ ಸಂಬಂಧಿಸಿದ ಪೋಸ್ಟ್ ಅನ್ನು ಅಭಿಷೇಕ್ ಲೈಕ್ ಮಾಡುವ ಮೂಲಕ ವದಂತಿಗಳಿಗೆ ಉತ್ತೇಜನ ನೀಡಿದ್ದರು. ನಂತರ ಇಬ್ಬರೂ ಕೂಡ ಬಹಳಷ್ಟು ಸಲ ಪ್ರತ್ಯೇಕವಾಗಿ ಕಂಡು ಬಂದರು. ಐಶ್ವರ್ಯಾ ಅವರು ಅಭಿಷೇಕ್ ಬಚ್ಚನ್ ಇಲ್ಲದೆಯೇ ‘SIIMA’ ಪ್ರಶಸ್ತಿಗಳಿಗೆ ಹಾಜರಾಗಿದ್ದರು. ಅವರಿಗೆ ಅತ್ಯುತ್ತಮ ನಟಿ (ವಿಮರ್ಶಕರು) ಪ್ರಶಸ್ತಿಯನ್ನು ನೀಡಲಾಯಿತು. ಆರಾಧ್ಯ ಬಚ್ಚನ್ ತನ್ನ ತಾಯಿಯನ್ನು ಹುರಿದುಂಬಿಸಿದರು. ಆದರೆ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹೊಗಳಲಿಲ್ಲ. ಈ ಕಾರಣದಿಂದಾಗಿ, ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಅಭಿಮಾನಿಗಳು ಭಾವಿಸಲು ಪ್ರಾರಂಭಿಸಿದರು.
ಆದರೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪುಲ್ ಸ್ಟಾಪ್ ಇಟ್ಟಿದ್ದು, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ವದಂತಿಯ ಕುರಿತು ತಮ್ಮ ಬ್ಲಾಗ್ನಲ್ಲಿ (Big B Blog) ಸ್ಪಷ್ಟನೆಯನ್ನು ನೀಡಿದ್ದಾರೆ. ಹೌದು, ಆಗಾಗ ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಜೀವನದ ಸಾಮಾನ್ಯ ಕಥೆಗಳನ್ನು ಹಂಚಿಕೊಳ್ಳುತ್ತಾರೆಯೇ ಹೊರತು ಅತೀ ಸೂಕ್ಷ್ಮ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಲು ಹೋಗುವುದಿಲ್ಲ. ಆದರೆ ಈ ಬಾರಿ ಮಾತ್ರ ತಮ್ಮ ಭಾವನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದು, ‘ಖಾಸಗಿ ವಿಷಯವಾದ ಕಾರಣ ನಾನು ಕುಟುಂಬದ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ… ಊಹಾಪೋಹಗಳು ಯಾವಾಗಲೂ ಊಹಾಪೋಹಗಳೇ ಆಗಿರುತ್ತವೆ. ಸ್ಪಷ್ಟಗೊಳಿಸದೇ ಇರುವ ವಿಚಾರ ಎಂದಿಗೂ ಅಸತ್ಯವೇ’ ಎಂದಿದ್ದಾರೆ ಅವರು.
‘ಇಂತಹ ಸುದ್ದಿಗಳನ್ನು ಮಾಡುವುದರಿಂದ ಕೆಲವರಿಗೆ ಲಾಭ ಆಗಬಹುದು. ಆದರೆ, ನನಗೆ ಯಾವಾಗಲೂ ಕುಟುಂಬವೇ ಮುಖ್ಯವಾಗಿರುತ್ತದೇ ಹಾಗೇ ನನ್ನ ಸಂಪೂರ್ಣ ಗಮನ ಅವರ ಮೇಲೆ ಇರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ ವೈವಾಹಿಕ ಜೀವನದಲ್ಲಿ ಸಮಸ್ಯೆ ಇದೆ ಎಂದು ಪ್ರಶ್ನಿಸುತ್ತಾರೆ.. ಸ್ಪಷ್ಟತೆ ಇಲ್ಲದೇ ಬರೆಯುವುದು ಎಷ್ಟು ಸರಿ’ ಎಂದು ಮಾಧ್ಯಮಗಳ ವಿರುದ್ದ ಬೇಸರ ಹೊರಹಾಕಿದ್ದಾರೆ ಅಮಿತಾಭ್.
ಇದನ್ನೂ ಓದಿ: Viral Video: ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೊ ನೋಡಿ
ಅಷ್ಟೇ ಅಲ್ಲದೇ ತಮ್ಮ ಬರವಣಿಗೆಯನ್ನು ಮುಂದುವರೆಸಿರುವ ಬಿಗ್ ಬಿ, ನಿಮಗೆ ಇಷ್ಟ ಬಂದಿದ್ದನ್ನೇ ನೀವು ಬರೆದುಕೊಳ್ಳಿ ಆದರೆ ನೀವು ಪ್ರಶ್ನಾರ್ಥಕ ಚಿಹ್ನೆ ಹಾಕಿದಾಗ ಅದು ಪ್ರಶ್ನೆಯೇ ಆಗಿರುತ್ತೆ. ಆದರೆ ಜನರು ಆ ಪ್ರಶ್ನೆಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನೇ ನಂಬುತ್ತಾರೆ.. ಇದರಿಂದ ವಿಚಾರ ಇನ್ನೂ ದೊಡ್ಡದಾಗುತ್ತಾ ಹೋಗುತ್ತದೆ, ನಿಮ್ಮ ಬರವಣಿಗೆಗೆ ಬೆಲೆ ಬರುತ್ತದೆ. ಆದರೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎಂದಿದ್ದಾರೆ. ಹಾಗೇ ನೀವು ಏನೇ ಮಾಡಿದರೂ ನಾನು ನಿಮ್ಮ ವೃತ್ತಿಯನ್ನು ಗೌರವಿಸುತ್ತೇನೆ, ನೀವು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯ ಬಗ್ಗೆ ನಮಗೆ ಹೆಮ್ಮೆ ಇದೆ, ಅದಕ್ಕಾಗಿ ಪ್ರಶಂಸೆಯನ್ನು ಮಾಡುತ್ತೇನೆ ಆದರೆ ಸುಳ್ಳು ಮತ್ತು ಉಪಯೋಗಿಸುವ ಪ್ರಶ್ನಾರ್ಥಕ ಚಿಹ್ನೆ ದಾರಿ ತಪ್ಪಿಸುತ್ತೆ ಎಂದಿದ್ದಾರೆ. ಸುಳ್ಳು ಮಾಹಿತಿಯನ್ನು ಹರಡುವುದರಿಂದ ಜನರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಈ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಜೀವನದ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎನ್ನುವುದನ್ನು ಅಮಿತಾಭ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.