Saturday, 14th December 2024

Bigg Boss Kannada 11: ನವರಾತ್ರಿ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಧರಿಸಿದ ಇಂಡೊ-ವೆಸ್ಟರ್ನ್ ಕುರ್ತಾ ಧೋತಿ ವಿಶೇಷತೆ ಏನು?

Bigg Boss Kannada 11

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕನ್ನಡ ಬಿಗ್‌ಬಾಸ್‌ನಲ್ಲಿ (Bigg Boss Kannada 11) ನಟ ಕಿಚ್ಚ ಸುದೀಪ್‌ ಧರಿಸಿದ್ದ, ನವರಾತ್ರಿ ಸ್ಪೆಷಲ್‌ ಟ್ರೆಡಿಷನಲ್‌ ವೇರ್ಸ್ (Traditional wares), ಇದೀಗ ಹಬ್ಬದ ಸೀಸನ್‌ನ ಮೆನ್ಸ್ ಎಥ್ನಿಕ್‌ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಆಗಿದೆ. ಫ್ಯಾಷನ್‌ ಪ್ರಿಯ ಯುವಕರನ್ನು ಸೆಳೆದಿದೆ. ನವರಾತ್ರಿಯ ಹಿನ್ನೆಲೆಯಲ್ಲಿ, ಕಿಚ್ಚ ಸುದೀಪ್‌, ಈ ವೀಕೆಂಡ್‌ನಲ್ಲಿ, ವೆಸ್ಟರ್ನ್‌ ಫ್ಯಾಷನ್‌ಗೆ ತಾತ್ಕಾಲಿಕ ವಿರಾಮ ಹಾಕಿ, ಟ್ರೆಡಿಷನಲ್‌ ಔಟ್‌ಫಿಟ್‌ನಲ್ಲಿ ಎರಡೂ ದಿನವೂ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಪಾದರಕ್ಷೆ ಧರಿಸದೇ, ತಮ್ಮ ನವರಾತ್ರಿ ವ್ರತವನ್ನೂ ಕೂಡ ಆಚರಿಸಿದ್ದಾರೆ. ಇದು ಸುದೀಪ್‌ ಅಭಿಮಾನಿಗಳನ್ನು ಮಾತ್ರವಲ್ಲದೇ, ಸ್ಥಳೀಯ ಫ್ಯಾಷನ್‌ ಪ್ರಿಯರ ಮನಸ್ಸನ್ನು ಗೆದ್ದಿದೆ.

ಚಿತ್ರಕೃಪೆ: ಕಲರ್ಸ್ ಕನ್ನಡ

ಇಂಡೋ-ವೆಸ್ಟರ್ನ್‌ ಕುರ್ತಾ-ಧೋತಿ ವಿಶೇಷತೆ

ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನ ಶನಿವಾರ ಹಾಗೂ ಭಾನುವಾರದ ಎರಡು ಎಪಿಸೋಡ್‌ಗಳಲ್ಲೂ ನಟ ಕಿಚ್ಚ ಸುದೀಪ್‌, ನವರಾತ್ರಿ ಪ್ರಯುಕ್ತ ಟ್ರೆಡಿಷನಲ್‌ ಲುಕ್‌ ನೀಡುವಂತಹ ಕುರ್ತಾ-ಧೋತಿ ಧರಿಸಿದ್ದರು. ಈ ಉಡುಗೆಗಳ ವಿಶೇಷತೆ ಏನೆಂದರೇ , ಶನಿವಾರ ಗ್ರೇ ಅಂದರೇ ಬೂದು ಬಣ್ಣಕ್ಕೆ ಆದ್ಯತೆ ನೀಡುವ ಸಲುವಾಗಿ ಇದೇ ಕಲರ್‌ನ ಡಿಸೈನರ್‌ ಕುರ್ತಾ- ಧೋತಿಯಲ್ಲಿ ಅವರು ಕಾಣಿಸಿಕೊಂಡರು. ಇನ್ನು, ಭಾನುವಾರದ ನವರಾತ್ರಿಯ ಕಲರ್‌, ಆರೆಂಜ್‌, ಅದೇ ಶೇಡ್‌ನ ಕುರ್ತಾ, ದುಪಟ್ಟಾ ಹಾಗೂ ಕ್ರೀಮ್‌ ಧೋತಿಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರು.

ಸೆಲೆಬ್ರೆಟಿ ಡಿಸೈನರ್‌ ಭರತ್‌ ಡಿಸೈನರ್‌ವೇರ್‌ ಇದು

ಇಂಡೋ-ವೆಸ್ಟರ್ನ್‌ ಶೈಲಿಯ ಉಡುಗೆಯಾದ ಈ ಕುರ್ತಾ ಹಾಗೂ ಧೋತಿ ಸೆಟ್ಟನ್ನು ಸುದೀಪ್‌ ಅವರ ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಕುರ್ತಾಗಳನ್ನು ಮಿಡ್‌ ಲೆಂಥ್‌ಗೆ ವಿನ್ಯಾಸ ಮಾಡಲಾಗಿದೆ. ಶನಿವಾರದ ಕುರ್ತಾ ಶಿಫಾನ್‌ ಫ್ಯಾಬ್ರಿಕ್‌ನದ್ದಾಗಿದೆ. ಇನ್ನು ಭಾನುವಾರದ್ದು, ಶೈನಿಂಗ್‌ ಕಾಣುವಂತಹ ಆರೆಂಜ್‌ ಬಣ್ಣದ್ದಾಗಿದೆ. ಇವೆರಡು ಸುದೀಪ್‌ ಅವರಿಗೆ ಕಂಪ್ಲೀಟ್‌ ಎಥ್ನಿಕ್‌ ಲುಕ್‌ ನೀಡಿದೆ ಎನ್ನುತ್ತಾರೆ ಡಿಸೈನರ್‌ ಭರತ್‌ ಸಾಗರ್‌. ಅಂದಹಾಗೆ, ಈ ಎರಡು ಎಥ್ನಿಕ್‌ವೇರ್‌ ಸಿದ್ಧಪಡಿಸಲು ಅಂದಾಜು ಸರಿ ಸುಮಾರು 65 ಸಾವಿರ ರೂ.ಗಳಿಂದ 80 ಸಾವಿರ ರೂ. ಗಳಷ್ಟು ವೆಚ್ಚವಾಗಿದೆಯಂತೆ.

ಈ ಸುದ್ದಿಯನ್ನೂ ಓದಿ | Unified Pension Scheme: ಏಕೀಕೃತ ಪಿಂಚಣಿ ಯೋಜನೆಯ ಅಧಿಸೂಚನೆ ಶೀಘ್ರದಲ್ಲೇ ಪ್ರಕಟ

ಸುದೀಪ್‌ ಎಥ್ನಿಕ್‌ವೇರ್ಸ್ ಲವ್‌

ಎಥ್ನಿಕ್‌ವೇರ್‌ಗಳು ಹೀಗೆಯೇ ಇರಬೇಕೆಂಬುದು ಸುದೀಪ್‌ರವರ ಅಭಿಲಾಷೆಯಾಗಿತ್ತು. ಅದರಂತೆ ವಿನ್ಯಾಸಗೊಳಿಸಲಾಗಿದೆ. ಇದೀಗ ಇವು ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿವೆ ಎನ್ನುತ್ತಾರೆ ಭರತ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)