Tuesday, 7th January 2025

Bihar Clash: ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಟೈರ್‌ಗೆ ಬೆಂಕಿ ಹಚ್ಚಿದ ಆರೋಪಿಯ ಕುಟುಂಬ!

Bihar Clash

ಪಟನಾ: ಬಿಹಾರದ (Bihar) ದರ್ಬಾಂಗ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ. ಪೊಲೀಸರ ದಾಳಿ ನಂತರ ಭಾರೀ ಪ್ರಮಾಣದ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ(Bihar Clash). ವರದಕ್ಷಿಣೆ ಪ್ರಕರಣದಲ್ಲಿ (Dowry Case) ಆರೋಪಿಯಾಗಿರುವ ಜಿತೇಂದ್ರ ಯಾದವ್ ಎಂಬ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಆತನ ಮನೆ ಬಳಿ ತೆರಳಿದ್ದು, ಆತನ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದಾರೆ.

ಗುಂಪೊಂದು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ಎಸೆದು ಅವರ ಬಂದೂಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದೆ. ನಂತರ ಪೊಲೀಸರು ಆರೋಪಿಯ ಮನೆ ಒಳಗೆ ಪ್ರವೇಶ ಮಾಡದಂತೆ  ಟೈರ್‌ಗಳನ್ನು ಸುಟ್ಟು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು ಮತ್ತು ಕಾನ್‌ಸ್ಟೆಬಲ್ ಸೇರಿದಂತೆ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಹೇರಿಯಾಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಅಭಾಂಡ ಪ್ರದೇಶದಲ್ಲಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿರುವ ವ್ಯಕ್ತಿಯನ್ನು ಬಂಧಿಸಲು ಪೊಲೀಸ್ ತಂಡ ತೆರಳಿದ್ದ ವೇಳೆ ಆರೋಪಿಯ ಕುಟುಂಬಸ್ಥರು ಹಾಗೂ ಇತರ ಸ್ಥಳೀಯರು ಪೊಲೀಸ್ ತಂಡದ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.  ನಡೆಸಿರುವ ಘಟನೆ ನಡೆದಿದೆ. .. ಅವರು ಆರೋಪಿಗಳನ್ನು ಬಲವಂತವಾಗಿ ಬಿಡುಗಡೆ ಮಾಡಿದರು” ಎಂದು ದರ್ಭಾಂಗ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.ದಾಳಿಯನ್ನು ತಡೆಯಲು ಮತ್ತು ಗುಂಪನ್ನು ಚದುರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯ ತಂಡವನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧನ ವಾರಂಟ್ ಹೊರಡಿಸಿದ ವ್ಯಕ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Bomb Threat : ಸ್ಕೂಲ್‌, ವಿಮಾನ, ಹೊಟೇಲ್‌ ಆಯ್ತು..ಈಗ ರೈಲಿಗೂ ಬಂತೂ ಬಾಂಬ್‌ ಬೆದರಿಕೆ! ಭಾರೀ ಆತಂಕ ಸೃಷ್ಟಿ

Leave a Reply

Your email address will not be published. Required fields are marked *