Saturday, 14th December 2024

ಬೈಕ್​ಗಳ ಮುಖಾಮುಖಿ ಡಿಕ್ಕಿ: ನಾಲ್ವರು ಯುವಕರ ಸಾವು

ನುವಾಪಾಡಾ: ದುರ್ಗಾ ಪೂಜಾ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಒಡಿಶಾದ ನುವಾಪಾದ ಜಿಲ್ಲೆಯ ರಾಜ್‌ಪುರ ಗ್ರಾಮದ ಬಳಿ ಬಿಜು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದೆ.

ದುರ್ಘಟನೆಯಲ್ಲಿ ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ.

ಮೃತರಲ್ಲಿ ಇಬ್ಬರು ಕಮಲಮಾಲ್ ಗ್ರಾಮದವರು, ಓರ್ವ ಭೀಮಪದರ್ ಗ್ರಾಮದವ ಮತ್ತು ಮತ್ತೋರ್ವ ಜಿಲ್ಲೆಯ ಭೈನುಶಾದರ ಗ್ರಾಮದವ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯ ದುರ್ಗಾ ಪೂಜಾ ಸಮಿತಿಯೊಂದು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರಳಿದ್ದ ಯುವಕರು ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಒಂದು ಬೈಕ್‌ನಲ್ಲಿ ನಾಲ್ವರು ಸಿನಪಾಲಿ ಕಡೆಯಿಂದ ಬರುತ್ತಿದ್ದರೆ, ಮೂವರು ಮತ್ತೊಂದು ಬೈಕ್‌ನಲ್ಲಿ ಬೋಡೆನ್‌ನಿಂದ ಸಿನಪಾಲಿ ಕಡೆಗೆ ಹೋಗು ತ್ತಿದ್ದರು. ಘಟನೆಯಲ್ಲಿ ನಾಲ್ವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡ ಇತರ ಮೂವರನ್ನು ಬೋಡೆನ್ ಮತ್ತು ನುವಾಪಾಡಾ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.