Wednesday, 25th December 2024

Billionaires In India: ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ; ಜಾಗತಿಕವಾಗಿ ಭಾರತಕ್ಕೆ ಎಷ್ಟನೇ ಸ್ಥಾನ?

Billionaires In India

ನವದೆಹಲಿ: 2024ರಲ್ಲಿ ಭಾರತವು 185 ಶತಕೋಟ್ಯಧಿಪತಿಗಳೊಂದಿಗೆ (Billionaires In India) ಜಾಗತಿಕವಾಗಿ 3ನೇ ಸ್ಥಾನ ಪಡೆದಿದೆ. ಯುಬಿಎಸ್‌ನ ಇತ್ತೀಚಿನ ಕೋಟ್ಯಧಿಪತಿಗಳ ವರದಿಯ (UBS latest Billionaire Ambitions Report) ಪ್ರಕಾರ ಕಳೆದ ವರ್ಷದಲ್ಲಿ ಭಾರತದಲ್ಲಿ ಕೋಟ್ಯಧಿಪತಿಗಳ ನಿವ್ವಳ ಮೌಲ್ಯವು (net worth of billionaires in India) ಶೇ. 42.1ರಷ್ಟು ಏರಿಕೆಯಾಗಿ 905.6 ಶತಕೋಟಿ ಡಾಲರ್‌ಗೆ ತಲುಪಿದೆ.

ಯುಬಿಎಸ್‌ನ ಇತ್ತೀಚಿನ ಕೋಟ್ಯಧಿಪತಿಗಳ ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಭಾರತವು 185 ಕೋಟ್ಯಧಿಪತಿಗಳನ್ನು ಹೊಂದಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕ 835 ಮತ್ತು ಚೀನಾ 427 ಕೋಟ್ಯಧಿಪತಿಗಳಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಕೋಟ್ಯಧಿಪತಿಗಳನ್ನು ಹೊಂದಿವೆ.

ಕಳೆದ 12 ತಿಂಗಳ ಅವಧಿಯಲ್ಲಿ ಭಾರತವು ಹೊಸ 32 ಕೋಟ್ಯಧಿಪತಿಗಳನ್ನು ಪಟ್ಟಿಗೆ ಸೇರಿಸಿದೆ. ಈ ಮೂಲಕ ಶೇ.21ರಷ್ಟು ನಿವ್ವಳ ಮೌಲ್ಯದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷದಲ್ಲಿ ಭಾರತದಲ್ಲಿ ಕೋಟ್ಯಧಿಪತಿಗಳ ನಿವ್ವಳ ಮೌಲ್ಯವು ಶೇ. 42.1ರಷ್ಟು ಏರಿಕೆಯಾಗಿ 905.6 ಶತಕೋಟಿ ಡಾಲರ್ ಗೆ ತಲುಪಿದೆ.

ಅಮೆರಿಕದಲ್ಲಿ 84 ಕೋಟ್ಯಧಿಪತಿಗಳು ಹೊಸದಾಗಿ ಸೇರಿದ್ದಾರೆ. ಚೀನಾದಲ್ಲಿ ಈ ಸಂಖ್ಯೆ 93ರಷ್ಟು ಇಳಿಕೆಯಾಗಿದೆ. ಅಮೆರಿಕದಲ್ಲಿ ಕೋಟ್ಯಧಿಪತಿಗಳ ಒಟ್ಟು ಸಂಪತ್ತು 4.6 ಟ್ರಿಲಿಯನ್‌ ಡಾಲರ್‌ನಿಂದ 5.8 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದ್ದು, ಚೀನಾದಲ್ಲಿ ಇದು 1.8 ಟ್ರಿಲಿಯನ್‌ ಡಾಲರ್‌ನಿಂದ 1.4 ಟ್ರಿಲಿಯನ್‌ ಡಾಲರ್‌ಗೆ ಕುಸಿದಿದೆ.

ಒಟ್ಟಾರೆಯಾಗಿ 2015 ಮತ್ತು 2024ರ ನಡುವೆ ಒಟ್ಟು ಬಿಲಿಯನೇರ್‌ಗಳ ಮೌಲ್ಯವು ಶೇ. 121ರಷ್ಟು ಹೆಚ್ಚಾಗಿದೆ. 6.3 ಟ್ರಿಲಿಯನ್‌ ಡಾಲರ್‌ನಿಂದ 14 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಬಿಲಿಯನೇರ್‌ಗಳ ಸಂಖ್ಯೆ 1,757 ರಿಂದ 2,682 ತಲುಪಿದೆ. ಭಾರತದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಮುಂದಿನ ದಶಕದಲ್ಲಿ ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ:  Narendra Modi: ಪ್ರಧಾನಿ ಮೋದಿಗೆ ಪ್ರಾಣ ಬೆದರಿಕೆ; ಮುಂಬೈ ಪೊಲೀಸರಿಗೆ ಬಂದ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ಏನಿದೆ?

ಭಾರತದಲ್ಲಿ ಸಾರ್ವಜನಿಕವಾಗಿ ಪಟ್ಟಿ ಮಾಡಲಾದ 108 ಕೋಟ್ಯಧಿಪತಿಗಳು ಕುಟುಂಬ ವ್ಯವಹಾರದಲ್ಲಿ ಗುರುತಿಸಿಕೊಂಡಿದ್ದು, ಈ ವರ್ಗದಲ್ಲಿ ದೇಶ ಮೂರನೇ ಸ್ಥಾನದಲ್ಲಿದೆ. ಭಾರತದ ಆರ್ಥಿಕ ಪರಿವರ್ತನೆಯಲ್ಲಿ ಕುಟುಂಬದ ವ್ಯವಹಾರಗಳು ಪ್ರಮುಖ ಪಾತ್ರವನ್ನು ವಹಿಸಿವೆ.