Sunday, 15th December 2024

ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ -2022 ಉದ್ಘಾಟನೆ ಇಂದು

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ -2022 ಅನ್ನು ಉದ್ಘಾಟಿಸಲಿದ್ದಾರೆ.

ಬಯೋಟೆಕ್ ಸ್ಟಾರ್ಟ್‌ಅಪ್ ಎಕ್ಸ್ಪೋ – 2022 ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಬಿಐಆರ್‌ಎಸಿ ಸ್ಥಾಪನೆಯಾಗಿ ಹತ್ತು ವರ್ಷ ಗಳನ್ನು ಪೂರೈಸಿದ ನೆನಪಿಗಾಗಿ ಆಯೋಜಿಸಲಾದ ಎರಡು ದಿನಗಳ ಕಾರ್ಯಕ್ರಮವಾಗಿದೆ.

‘ಬಯೋಟೆಕ್ ಸ್ಟಾರ್ಟ್ ಅಪ್ ಇನ್ನೋವೇಶನ್ಸ್: ಟುವರ್ಡ್ ಆತ್ಮನಿರ್ಭರ್ ಭಾರತ್’ ಎಂಬುದು ಎಕ್ಸ್ ಪೋದ ಥೀಮ್ ಆಗಿದೆ ಎಂದು ಎಐಆರ್ ಕರೆಸ್ಪಾಂಡೆಂಟ್ ವರದಿ ಮಾಡಿದೆ. ಬಯೋಟೆಕ್ನಾಲಜಿ ಮತ್ತು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ ಬಿಐಆರ್‌ಎಸಿ ಇದನ್ನು ಆಯೋಜಿಸುತ್ತಿದೆ.

ಎಕ್ಸ್ಪೋವು ಉದ್ಯಮಿಗಳು, ಹೂಡಿಕೆದಾರರು, ಉದ್ಯಮದ ನಾಯಕರು, ವಿಜ್ಞಾನಿಗಳು, ಸಂಶೋಧಕರು, ಜೈವಿಕ ಇನ್ಕ್ಯುಬೇ ಟರ್ಗಳು, ತಯಾರಕರು, ನಿಯಂತ್ರಕರು, ಸರ್ಕಾರಿ ಅಧಿಕಾರಿಗಳು ಇತ್ಯಾದಿಗಳನ್ನು ಸಂಪರ್ಕಿಸಲು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಎಕ್ಸ್ ಪೋದಲ್ಲಿ 300 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದು ಆರೋಗ್ಯ ರಕ್ಷಣೆ, ಜೀನೋಮಿಕ್ಸ್, ಬಯೋ ಫಾರ್ಮಾ, ಕೃಷಿ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ತ್ಯಾಜ್ಯದಿಂದ ಮೌಲ್ಯಕ್ಕೆ, ಶುದ್ಧ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನದ ಅನ್ವಯಗಳನ್ನು ಪ್ರದರ್ಶಿಸುತ್ತದೆ.