Saturday, 14th December 2024

ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ…!

ನವದೆಹಲಿ: ಆಗ್ರಾದ ಓಲ್ಡ್ ಮಂಡಿ ಏರಿಯಾದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜನ್ಮದಿನವನ್ನು ರಸ್ತೆಯ ಮೇಲೆ ಆಚರಿಸುವ ಮೂಲಕ ಮತ್ತು ಅಲ್ಲೇ ಪಟಾಕಿ ಸಿಡಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿಯೇ ಆತನ ಸ್ನೇಹಿತರು ಮತ್ತು ಕುಟುಂಬದವರು ಸುತ್ತುವರೆದು ಸಂಭ್ರಮಿಸಿದ್ದಾರೆ.

ಪಟಾಕಿ 30 ನಿಮಿಷಗಳ ಕಾಲ ಮುಂದುವರೆದಿದ್ದು ಇದು ಟ್ರಾಫಿಕ್ ಜಾಮ್‌ಗೆ ಕಾರಣ ವಾಯಿತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ

ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ ವ್ಯಕ್ತಿಯನ್ನು ಪ್ರದೀಪ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದ ಸದಸ್ಯ ಎಂದು ವರದಿ ಮಾಡಿದೆ.

ಫೆಬ್ರವರಿ 6 ರಂದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ರಸ್ತೆಯೊಂದರಲ್ಲಿ ಆರು ಜನರ ಗುಂಪೊಂದು ನೃತ್ಯ ಮಾಡಿದ್ದಾರೆ. ಅವರು ರೈಫಲ್‌ಗಳನ್ನು ಹಿಡಿದುಕೊಂಡು ಮದ್ಯ ಸೇವಿಸುತ್ತಾ ಜೋರಾಗಿ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ವರ್ಷ ಅಕ್ಟೋಬರ್ 8 ರಂದು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಆಚರಿಸಿದ್ದಕ್ಕಾಗಿ ಗಾಜಿಯಾಬಾದ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಸೆಪ್ಟೆಂಬರ್ 28 ರಂದು ಹಿಂಡನ್ ಎಲಿವೇಟೆಡ್ ರಸ್ತೆಯಲ್ಲಿ ಎರಡು ಹುಟ್ಟುಹಬ್ಬದ ಪಾರ್ಟಿಗಳನ್ನು ನಡೆಸಿದ್ದಕ್ಕಾಗಿ 21 ಮಂದಿಯನ್ನು ಬಂಧಿಸಲಾಗಿದೆ ಮತ್ತು ಎಂಟು ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ನವೆಂಬರ್ 2022 ರಲ್ಲಿ ಉತ್ತರ ಪ್ರದೇಶ ಪೊಲೀಸರು ಲಕ್ನೋದ ಬೀದಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಯುವಕನಿಂದಲೇ ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.