Saturday, 23rd November 2024

ಟಾಟಾದಿಂದ ನೀರಿನ ಬ್ರ್ಯಾಂಡ್‌ ಬಿಸ್ಲೆರಿ ಖರೀದಿ

ಮುಂಬೈ: ಕುಡಿಯುವ ನೀರಿನ ಬ್ರ್ಯಾಂಡ್‌ ಬಿಸ್ಲೆರಿಯನ್ನು ಬಿಸ್ಲೆರಿ ಇಂಟರ್‌ನ್ಯಾಷನಲ್‌ ನಿಂದ ಟಾಟಾ ಕನ್ಸೂಮರ್ ಪ್ರಾಡಕ್ಟ್ ಲಿಮಿಟೆಡ್ ಏಳು ಸಾವಿರ ಕೋಟಿ. ರೂಗೆ ಖರೀದಿಸಿದೆ ಎಂದು ವರದಿಯಾಗಿದೆ.

ಬಿಸ್ಲೆರಿ ಇಂಟರ್‌ನ್ಯಾಷನಲ್ ಲಿಮಿಟೆಡ್ ರಮೇಶ್ ಚೌಹಾಣ್ ಒಡೆತನದಲ್ಲಿದೆ. ಈಗಾಗಲೇ ತಂಪು ಪಾನೀಯಗಳಾದ ಥಮ್ಸ್‌ಅಪ್‌  ಗೋಲ್ಡ್ ಸ್ಟಾಟ್ ಹಾಗೂ ಲಿಮ್ಕಾವನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕಗಳ ನಂತರ ಇದೀಗ ಬಿಸ್ಲೆರಿ ಯನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಲಾಗಿದೆ.

ಒಪ್ಪಂದದ ಪ್ರಕಾರ ಮುಂದಿನ ಎರಡು ವರ್ಷಗಳ ವರೆಗೆ ಬಿಸ್ಲೆರಿ ಈಗಿರುವ ಮಾಲೀಕರ ಬಳಿಯೇ ಇರಲಿದೆ. 82 ವರ್ಷದ ಚೌಹಾಣ್ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಸ್ಲೆರಿಯ ಮಾರುಕಟ್ಟೆಯನ್ನು ಮುಂದಿನ ಹಂತಕ್ಕೆ ಹೊತ್ತೊಯ್ಯುವ ಉತ್ತರಾಧಿಕಾರಿ ಇಲ್ಲದ ಕಾರಣ ಚೌಹಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ಟಾಟಾ ಸಮೂಹ ಬಿಸ್ಲೆರಿಯನ್ನು ಇನ್ನೂ ಉತ್ತಮವಾಗಿ ನಿರ್ವಹಿಸುತ್ತದೆ ಹಾಗೂ ಮುಂದಿನ ಹಂತಕ್ಕೆ ಹೊತ್ತೊಯ್ಯುತ್ತದೆ ಎನ್ನುವ ನಿರೀಕ್ಷೆ ಇದೆ ಎಂದು ಚೌಹಾಣ್ ಹೇಳಿದ್ದಾರೆ.