Sunday, 15th December 2024

ಉಕ್ರೇನ್ ವಿರುದ್ಧ ಯುದ್ಧ: ಬಿಟ್‌ಕಾಯಿನ್ ಮೌಲ್ಯದಲ್ಲಿ ಕುಸಿತ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟು ನಡೆದಿದ್ದು, ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ.

ಬಿಟ್‌ಕಾಯಿನ್ ಶೇಕಡಾ 8 ರಷ್ಟು ಕುಸಿದಿದೆ. ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್, 10 ಪ್ರತಿಶತದಷ್ಟು ಕುಸಿತ ಕಂಡು $2,376.19 ಗೆ ಇಳಿದಿದೆ‌. ಡಾಡ್ಜ್‌ಕಾಯಿನ್‌ 12%, ಶಿಬಾ ಇನು 10%, ಪೋಲ್ಕಾಡೋಟ್ 10% ಮತ್ತು ಪಾಲಿಗಾನ್ 12% ರಷ್ಟು ಕುಸಿತ ಕಂಡಿದೆ.

ಕಳೆದ 24 ಗಂಟೆಗಳಲ್ಲಿ ಜಾಗತಿಕ ವ್ಯಾಪಾರದ ಪ್ರಮಾಣವು ಸುಮಾರು 191% ಕುಸಿದಿದೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧವನ್ನು ಘೋಷಿಸಿದ ನಂತರ ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಪ್ರಮುಖ ಆಲ್ಟ್‌ಕಾಯಿನ್‌ಗಳು ಕೆಂಪು ವಲಯದಲ್ಲಿ ವಹಿವಾಟಾಗುತ್ತಿವೆ.