ಈ ಸಭೆಗೆ ಪ್ರತಿನಿಧಿಗಳು ಹೈದರಾಬಾದ್ಗೆ ಆಗಮಿಸಲಾರಂಭಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಸ್ವಾಗತಿಸಲು ರಾಜ್ಯ ಘಟಕದಿಂದ ಮೆಗಾ ರೋಡ್ಶೋ ಏರ್ಪಡಿಸಲಾಗಿದೆ. ಶಂಶಾಬಾದ್ನಲ್ಲಿರುವ ಹೈದರಾ ಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದು ಕಿಲೋಮೀಟರ್ ವರೆಗೆ ರೋಡ್ಶೋಗೆ ಸಿದ್ಧತೆ ನಡೆಸಲಾಗಿದೆ.
ಇಡೀ ಹೈದರಾಬಾದ್ ನಗರವು ಪಕ್ಷದ ಧ್ವಜ ಮತ್ತು ಬ್ಯಾನರ್ಗಳೊಂದಿಗೆ ಕೇಸರಿಮಯ ವಾಗಿದೆ. ಪೋಸ್ಟರ್ಗಳು ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸುತ್ತಿದ್ದು, ನಗರದ ಪ್ರತಿ ಮೂಲೆ ಮೂಲೆಯಲ್ಲೂ ಬಿಜೆಪಿಯ ಪ್ರಮುಖ ನಾಯಕರ ದೊಡ್ಡ ಕಟೌಟ್ಗಳು ಮತ್ತು ಬ್ಯಾನರ್ಗಳು ತುಂಬಿಕೊಂಡಿವೆ.