Friday, 18th October 2024

BJP Membership : ಬಿಜೆಪಿಯ ಸಕ್ರಿಯ ಸದಸ್ಯರಾಗಿ ಸದಸ್ಯತ್ವ ನವೀಕರಿಸಿದ ಪ್ರಧಾನಿ ಮೋದಿ

BJP Membership

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಿಜೆಪಿಯ ಮೊದಲ ಸಕ್ರಿಯ ಸದಸ್ಯರಾಗಿ ತಮ್ಮ ಸದಸ್ಯತ್ವವನ್ನು (BJP Membership) ನವೀಕರಿಸಿದ್ದಾರೆ. ವಿಕಸಿತ್ಭಾ ಭಾರತ ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ಇನ್ನಷ್ಟು ವೇಗ ಸಿಗಲಿದೆ. ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಉಪಸ್ಥಿತಿಯಲ್ಲಿ ಇಂದು ಮೊದಲ ಸಕ್ರಿಯ ಸದಸ್ಯನಾಗುವ ಮೂಲಕ ಸಕ್ರಿಯಾ ಸದಸ್ಯತ್ವಾ ಅಭಿಯಾನಕ್ಕೆ ಚಾಲನೆ ನೀಡಲು ಹೆಮ್ಮೆಪಡುತ್ತೇನೆ. ಇದು ತಳಮಟ್ಟದಲ್ಲಿ ನಮ್ಮ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮತ್ತು ರಾಷ್ಟ್ರೀಯ ಪ್ರಗತಿಗೆ ನಮ್ಮ ಪಕ್ಷದ ಕಾರ್ಯಕರ್ತರ ಕೊಡುಗೆ ಖಚಿತಪಡಿಸುವ ಆಂದೋಲನ. ಸಕ್ರಿಯ ಸದಸ್ಯರಾಗಲು, ಒಬ್ಬ ಕಾರ್ಯಕರ್ತ ಒಂದೇ ಬೂತ್ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ 50 ಸದಸ್ಯರನ್ನು ನೋಂದಾಯಿಸಬೇಕು. ಅಂತಹ ಕಾರ್ಯಕರ್ತರು ಮಂಡಲ ಸಮಿತಿ ಮತ್ತು ಅದಕ್ಕಿಂತ ಹೆಚ್ಚಿನ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಅದೇ ಸಮಯದಲ್ಲಿ, ಮುಂಬರುವ ದಿನಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಅವರಿಗೆ ಅನೇಕ ಅವಕಾಶಗಳು ಸಿಗುತ್ತವೆ” ಎಂದು ಮೋದಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಪ್ಟೆಂಬರ್ 2ರಂದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸದಸ್ಯತ್ವವನ್ನು ನವೀಕರಿಸುವ ಮೂಲಕ ಬಿಜೆಪಿಯ 2024ರ ಸದಸ್ಯತ್ವ ಅಭಿಯಾನ ‘ಸಂಘಟನ್ ಪರ್ವ, ಸದಸ್ಯತಾ ಅಭಿಯಾನ 2024’ ಆರಂಭಿಸಿದ್ದರು. ಈ ವೇಳೆ ಅವರು ಯುವಕರೊಂದಿಗೆ ಸಂಪರ್ಕ ಸಾಧಿಸಲು ವಿಶೇಷ ಪ್ರಯತ್ನ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು.

ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದು ಅವರು ಹೇಳಿದ್ದರು. ಬಿಜೆಪಿ ಕೂಡ ತನ್ನ ಕೆಲಸವನ್ನು ವಿಸ್ತರಿಸುತ್ತಿದೆ ಮತ್ತು ಜನರ ನಿರೀಕ್ಷೆಗಳಿಗೆ ಅನುಗುಣವಾಗಿರಲು ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Election Results 2024 : ಚುನಾವಣೋತ್ತರ ಸಮೀಕ್ಷೆ ಫೇಲ್‌; ಹರಿಯಾಣ, ಜಮ್ಮು ಕಾಶ್ಮೀರ ಊಹೆ ಉಲ್ಟಾ

ಮೊದಲ ದಿನದಂದು 47 ಲಕ್ಷ ಸದಸ್ಯರು ಬಿಜೆಪಿ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದರು. ಮೊದಲ ಹಂತದಲ್ಲಿ, ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 25ರವರೆಗೆ, 6 ಕೋಟಿ ಸದಸ್ಯರನ್ನು ನೋಂದಾಯಿಸಲಾಗಿತ್ತು.

ಮಧ್ಯಪ್ರದೇಶದಲ್ಲಿ 1 ಕೋಟಿ ಸದಸ್ಯತ್ವ

ಪಕ್ಷದ ಮೂಲಗಳ ಪ್ರಕಾರ ಮೊದಲ ಹಂತದಲ್ಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶವು 1 ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸಿದರೆ ಗುಜರಾತ್ ಮತ್ತು ಅಸ್ಸಾಂ ಕ್ರಮವಾಗಿ 85 ಲಕ್ಷ ಮತ್ತು 50 ಲಕ್ಷ ಸದಸ್ಯರನ್ನು ನೋಂದಾಯಿಸಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ ಮತ್ತು ತ್ರಿಪುರಾದಂತಹ ಸಣ್ಣ ರಾಜ್ಯಗಳು ಸದಸ್ಯರ ನೋಂದಣಿಯಲ್ಲಿ ವೇಗ ಕಾಯ್ದುಕೊಂಡಿದೆ.

ಅಕ್ಟೋಬರ್ 1 ರಿಂದ 15 ರವರೆಗೆ ನಡೆಯಲಿರುವ ಎರಡನೇ ಹಂತದ ‘ಸದಸ್ಯತಾ ಅಭಿಯಾನ’ದಲ್ಲಿ ಹಿಂದುಳಿದಿರುವ ಸಂಸದೀಯ ಕ್ಷೇತ್ರಗಳು, ವಿಧಾನಸಭಾ ಕ್ಷೇತ್ರಗಳು, ಜಿಲ್ಲಾ ಮತ್ತು ಮಂಡಲಗಳಿಗೆ ಆದ್ಯತೆ ನೀಡಲಾಗುತ್ತಿದೆ.