Monday, 14th October 2024

ಕೋವಿಡ್ ಸೋಂಕಿಗೆ ಬಿಜೆಪಿ ಶಾಸಕ ಗೋತಮ್ ಲಾಲ್ ಮೀನಾ ಬಲಿ

ಜೈಪುರ: ಬಿಜೆಪಿ ಮುಖಂಡ ಹಾಗೂ ಶಾಸಕ ಗೋತಮ್ ಲಾಲ್ ಮೀನಾ ಉದಯಪುರ ಆಸ್ಪತ್ರೆಯಲ್ಲಿ ಕೋವಿಡ್  ಸೋಂಕಿ ನಿಂದಾಗಿ ಮೃತಪಟ್ಟಿದ್ದಾರೆ.

56 ವರ್ಷದ ಧರಿಯಾವಾಡ ಕ್ಷೇತ್ರದ ಶಾಸಕ ಗೋತಮ್ ಲಾಲ್ ಮೀನಾ ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸ ಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ತಿಳಿಸಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ಗೋತಮ್ ಲಾಲ್ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್, ಸ್ಪೀಕರ್ ಸಿಪಿ ಜೋಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪೂನಿಯಾ ಸಂತಾಪ ಸೂಚಿಸಿದ್ದಾರೆ.