ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಸರ್ಕಾರ ರಚನೆಯಾಗಬೇಕು ಎಂದು ಭಾವಿಸುತ್ತೇನೆ. ಎನ್‌ಸಿಪಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಿಂದ ತಮ್ಮ ಬೆಂಬಲ ಹಿಂಪಡೆದು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ಶರದ್ ಪವಾರ್‌ಗೆ ರಾಮದಾಸ್ ಅಠವಳೆ ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ತಿದ್ದುಪಡಿ ಕಾಯ್ದೆಯ ತಿದ್ದುಪಡಿಗಳ ಬಗ್ಗೆ ಹಿರಿಯ ಮರಾಠರ ಮೀಸಲಾತಿ ಕುರಿತು ಶರದ್ ಪವಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಶನಿವಾರ ಒಂದು ಗಂಟೆ ಸಭೆ ನಡೆದಿದೆ. ಬೆನ್ನಲ್ಲೇ ಬಿಜೆಪಿ ಹಾಗೂ ಎನ್‌ಸಿಪಿ ಜೊತೆಯಾಗುತ್ತದೆಯೇ ಎಂಬ ಊಹಾಪೋಹಗಳು ಹುಟ್ಟಿಕೊಂಡವು.
ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಎರಡು ಪಕ್ಷಗಳು ಒಗ್ಗೂಡುವುದಿಲ್ಲ ಎಂಬ ಮಹಾ ರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಠವಳೆ, “ಶಿವಸೇನೆ, ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ನದಿಯ ವಿವಿಧ ತೀರಗಳಲ್ಲಿದ್ದವು, ಆದರೆ ಒಟ್ಟಿಗೆ ಆದವು. ಬಿಜೆಪಿ ಮತ್ತು ಎನ್‌ಸಿಪಿ ಏಕೆ ಒಟ್ಟಿಗೆ ಬರಲು ಸಾಧ್ಯವಿಲ್ಲ?,” ಎಂದು ಪ್ರಶ್ನಿಸಿದ್ದಾರೆ,
ಶಿವಸೇನೆಗೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು. ಕಾಂಗ್ರೆಸ್ ನಾನಾ ಪಟೋಲೆ ಹಾಗೂ ಪವಾರ್ ಜಿ ವಿರುದ್ಧ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ. ಅದಕ್ಕಾಗಿಯೇ ಶರದ್ ಪವಾರ್ ಜಿ ಎನ್‌ಡಿಎ ಜೊತೆ ಬರಬೇಕು,” ಎಂದು ಮನವಿ ಮಾಡಿದ್ದಾರೆ.
ಎನ್‌ಸಿಪಿ ಮತ್ತು ಶರದ್ ಪವಾರ್ ಅವರ ಕಾರಣದಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಮಾತುಕತೆ ಏನೇ ನಡೆದಿರಲಿ. ಶರದ್ ಪವಾರ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸ್ನೇಹ ಉತ್ತಮವಾಗಿರಬೇಕು ಎಂದು ಹೇಳಿದರು.