Sunday, 8th September 2024

ಕೂನೂರು ಬಳಿ ಹೆಲಿಕಾಪ್ಟರ್ ದುರಂತ: ಬ್ಲ್ಯಾಕ್ ಬಾಕ್ಸ್ ಪತ್ತೆ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನ ಎರಡೂ ಸದನಗಳಲ್ಲಿ ಗುರುವಾರ ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಲೋಕಸಭೆ ಯಲ್ಲಿ ರಕ್ಷಣಾ ಸಚಿವರು ಅಧಿಕೃತ ಹೇಳಿಕೆ ನೀಡಲಿದ್ದಾರೆ.

ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ ಮಿ-17ವಿ5 ಸೇನಾ ಹೆಲಿಕಾಪ್ಟರ್ ತಮಿಳು ನಾಡಿನ ಕೂನೂರು ಬಳಿ ಭೀಕರ ದುರಂತ ಕ್ಕೀಡಾಗಿತ್ತು.

ಜನರಲ್ ಬಿಪಿನ್ ರಾವತ್ ಅವರು ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಡಿಸೆಂಬರ್ 31, 2019ರಲ್ಲಿ ನೇಮಕ ಗೊಂಡಿದ್ದರು. ಅದಕ್ಕೂ ಮೊದಲು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಜನವರಿ 2017ರಿಂದ ಡಿಸೆಂಬರ್ 2019ರವರೆಗೆ ಸೇವೆ ಸಲ್ಲಿಸಿ ದ್ದರು.

ತಮಿಳು ನಾಡಿನ ಕೂನೂರು ಬಳಿ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಇದರಿಂದ ದುರಂತಕ್ಕೆ ನಿಖರ ಕಾರಣ ದೊರಕಲಿದೆ. ವಾಯುಪಡೆ ಸಿಬ್ಬಂದಿ ಹುಡುಕಾಡಿದಾಗ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.

error: Content is protected !!