Tuesday, 26th November 2024

ಬ್ಲ್ಯಾಕ್ ಫಂಗಸ್‌: ಗುಜರಾತಿಗೆ ಮೊದಲ, ಮಹಾರಾಷ್ಟ್ರಕ್ಕೆ ಎರಡನೇ ಸ್ಥಾನ

ನವದೆಹಲಿ: ಭಾರತವು  11,717 ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಪ್ರಕರಣಗಳನ್ನ ದಾಖಲಿಸಿದೆ. ಗುಜರಾತ್‌ ಅತೀ ಹೆಚ್ಚು ಪ್ರಕರಣಗಳಿಂದ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.

ಬುಧವಾರ ಸಾಮಾಜಿಕ ಜಾಲತಾಣದಲ್ಲಿ ದತ್ತಾಂಶ ಹಂಚಿಕೊಂಡಿರುವ ಕೇಂದ್ರ ಸಚಿವ ಸದಾನಂದ ಗೌಡ, ‘ಮಾರಣಾಂತಿಕ ಶಿಲೀಂಧ್ರ ಸೋಂಕಿನ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೋಟೆರಿಕಿನ್ ಬಿ ಔಷಧದ ಹೆಚ್ಚುವರಿ 29,250 ಸೀಸೆಗಳನ್ನ ಚಿಕಿತ್ಸೆಯಲ್ಲಿ ರುವ ರೋಗಿಗಳ ಸಂಖ್ಯೆಯ ಆಧಾರದ ಮೇಲೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂಚಿಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ 2,859, ಮಹಾರಾಷ್ಟ್ರದಲ್ಲಿ 2,770 ಕಪ್ಪು ಶಿಲೀಂಧ್ರ,  ಪ್ರಕರಣಗಳು ದಾಖಲಾಗಿದ್ದು, ಆಂಧ್ರಪ್ರದೇಶ ಮೂರನೇ ಸ್ಥಾನದಲ್ಲಿದೆ. ಅಲ್ಲಿ 768 ಪ್ರಕರಣಗಳು ದಾಖಲಾಗಿವೆ.