Tuesday, 7th January 2025

Blackbuck Deer: ಏಕತಾ ಪ್ರತಿಮೆ ಬಳಿ ಒಂದಲ್ಲ… ಎರಡಲ್ಲ ಬರೋಬ್ಬರಿ 8 ಕೃಷ್ಣಮೃಗಳು ಸಾವು- ಅಷ್ಟಕ್ಕೂ ನಡೆದಿದ್ದೇನು?

Blackbuck Deer

ಗಾಂಧಿನಗರ: ಗುಜರಾತ್‌ನ (Gujarat) ನರ್ಮದಾ ಜಿಲ್ಲೆಯಲ್ಲಿರುವ ಏಕತಾ ಪ್ರತಿಮೆಯ (Statue Of Unity) ಬಳಿ ಚಿರತೆಯೊಂದು ಕೃಷ್ಣಮೃಗವನ್ನು ಬೇಟೆಯಾಡಿದ್ದು, ಅದನ್ನು ಕಂಡು ಜತೆಗಿದ್ದ ಇತರೆ ಏಳು ಕೃಷ್ಣಮೃಗಗಳು ಆಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಜನವರಿ 1ರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಜಂಗಲ್ ಸಫಾರಿ ಪಾರ್ಕ್‌ಗೆ ಚಿರತೆಯೊಂದು ನುಗ್ಗಿ ಕೃಷ್ಣಮೃಗವನ್ನು (Blackbuck Deer) ಕೊಂದಿದೆ. ಆಗ ಜತೆಗಿದ್ದ ಇತರೆ ಪರಿಣಾಮ 7 ಕೃಷ್ಣಮೃಗಗಳು ಆಘಾತದಿಂದ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಅರಣ್ಯ ಅಧಿಕಾರಿಗಳ ಪ್ರಕಾರ, 2 ರಿಂದ 3 ವರ್ಷ ವಯಸ್ಸಿನ ಚಿರತೆ, ಕೆವಾಡಿಯಾ ಅರಣ್ಯ ವಿಭಾಗದ ಪರಿಧಿಯಲ್ಲಿ ಇರುವ ಉದ್ಯಾನವನದ ಬೇಲಿಯನ್ನು ದಾಟಿ ಉದ್ಯಾನವನ್ನು ಪ್ರವೇಶ ಮಾಡಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆ ಸಮೀಪವಿರುವ ಪ್ರಮುಖ ಆಕರ್ಷಣೆಯಾದ ಉದ್ಯಾನವನವು ಶೂಲಪನೇಶ್ವರ ವನ್ಯಜೀವಿ ಅಭಯಾರಣ್ಯದ ದಟ್ಟವಾದ ಕಾಡುಗಳಿಂದ ಸುತ್ತುವರೆದಿದೆ.

ಆಹಾರಕ್ಕಾಗಿ ಚಿರತೆ ಕೃಷ್ಣಮೃಗಗಳಿರುವ ಉದ್ಯಾನವನಕ್ಕೆ ಕಾಲಿಟ್ಟಿತ್ತು. ಒಂದು ಕೃಷ್ಣಮೃಗವನ್ನು ಬೇಟೆಯಾಡಿದೆ. ಅಲ್ಲಿಯೇ ಇದ್ದ ಉಳಿದ ಏಳು ಕೃಷ್ಣ ಮೃಗಗಳು ಆಘಾತದಿಂದ ಮೃತಪಟ್ಟಿವೆ. ಎಲ್ಲಾ ಎಂಟು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ವರದಿ ಬಂದ ಮೇಲೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಂತರ ಕೃಷ್ಣ ಮೃಗಗಳನ್ನು ಸುಡಲಾಗಿದೆ.

ಕೆವಾಡಿಯಾ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅಗ್ನಿವೀರ್ ವ್ಯಾಸ್, ಮಾತನಾಡಿ ಸುತ್ತಮುತ್ತಲಿನ ಅರಣ್ಯಗಳಲ್ಲಿ ಚಿರತೆ ಚಲನವಲನಗಳು ಸಾಮಾನ್ಯವಾಗಿದ್ದರೂ, ಇದೇ ಮೊದಲ ಬಾರಿಗೆ ಚಿರತೆ ಪಾರ್ಕ್‌ ಒಳಗೆ ನುಗ್ಗಿದೆ. 400 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಉದ್ಯಾನವನದ ಮೇಲೆ ನಿಗಾ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ನಂತರ, ಉದ್ಯಾನವನ್ನು ತಾತ್ಕಾಲಿಕವಾಗಿ ಪ್ರವಾಸಿಗರಿಗೆ 48 ಗಂಟೆಗಳ ಕಾಲ ಮುಚ್ಚಲಾಯಿತು. ಜನವರಿ 3 ರಂದು ಉದ್ಯಾನವನ್ನು ಪುನಃ ತೆರೆಯಲಾಗಿದ್ದರೂ, ಚಿರತೆ ಮರಳುವ ಸಾಧ್ಯತೆಯ ಬಗ್ಗೆ ಕಳವಳಗಳು ವ್ಯಕ್ತವಾಗಿದೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಒಂದು ಪ್ರಾಣಿಯ ಪ್ರಭೇದದಲ್ಲಿ ಕೃಷ್ಣಮೃಗವೂ ಸೇರಿದೆ. ಇದನ್ನು ಬಿಷ್ಣೋಯ್‌ ಸಮಾಜದವರು ದೇವರ ರೂಪ ಎಂದು ಪೂಜಿಸುತ್ತಾರೆ. 1998 ರಲ್ಲಿ ನಟ ಸಲ್ಮಾನ್‌ ಖಾನ್‌ ಜೋಧ್‌ಪುರದಲ್ಲಿ ಹಮ್‌ ಸಾಥ್‌ ಸಾಥ್‌ ಹೇ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣ ಮೃಗ ಬೇಟೆಯಾಡಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ರಾಜಸ್ಥಾನ ನ್ಯಾಯಾಲಯ ಅವರಿಗೆ ಶಿಕ್ಷೆಯನ್ನೂ ಕೂಡ ಪ್ರಕಟಿಸಿತ್ತು. ನಂತರ ಸುಪ್ರೀಂ ಕೋರ್ಟ್‌ ಮೊರೆ ಹೋದ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಬೇಟೆಯ ನಂತರ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹಾಗೂ ಆತನ ಸಹಚರರು ಸಲ್ಮಾನ್‌ ಖಾನ್‌ಗೆ ಜೀವಬೆದರಿಕೆ ಹಾಕಿದ್ದರು. ಹಲವು ಬಾರಿ ಅವರ ಕೊಲೆ ಪ್ರಯತ್ನ ಕೂಡ ನಡೆದಿತ್ತು.

ಈ ಸುದ್ದಿಯನ್ನೂ ಓದಿ : Baba Siddique: ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ನಡೆಸಿದಾಗಲೇ ನಡೆದಿತ್ತಾ ಸಿದ್ದಿಕಿ ಹತ್ಯೆ ಪ್ಲಾನ್‌ ?

Leave a Reply

Your email address will not be published. Required fields are marked *