Monday, 13th January 2025

Border Clashes: ಗಡಿ ವಿವಾದ; ಬಾಂಗ್ಲಾದೇಶ ರಾಯಭಾರಿಗೆ ಭಾರತ ಸಮನ್ಸ್!

ನವದೆಹಲಿ: ಗಡಿಯಲ್ಲಿ ತಂತಿ ಬೇಲಿ ನಿರ್ಮಾಣಕ್ಕೆ ಸಂಬಂಧಿಸಿ ಭಾರತ(India) ಮತ್ತು ಬಾಂಗ್ಲಾದೇಶದ(Bangladesh) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಗಂಭೀರವಾಗಿ ಚರ್ಚಿಸಲು ಭಾರತದ ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶದ ಉಪ ರಾಯಭಾರಿ (Deputy Envoy) ನುರಾಲ್ ಇಸ್ಲಾಂ ಅವರಿಗೆ ಸಮನ್ಸ್ ನೀಡಿದೆ(Border Clashes).

ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾನುವಾರ(ಜ.12) ಢಾಕಾದ(Dhaka) ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ(Pranay Verma) ಅವರಿಗೆ ಸಮನ್ಸ್ ಜಾರಿ ಮಾಡಿದ ಒಂದು ದಿನದ ನಂತರ ಬಾಂಗ್ಲಾದೇಶದ ಉಪ ಹೈಕಮಿಷನರ್ ಗೆ ಭಾರತ ಸಮನ್ಸ್ ನೀಡಿದೆ. ಭಾನುವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾರತ-ಬಾಂಗ್ಲಾ ಗಡಿಯಲ್ಲಿ ಐದು ಸ್ಥಳಗಳಲ್ಲಿ ತಂತಿ ಬೇಲಿ ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಈ ರೀತಿಯ ಕ್ರಮಗಳು ಗಡಿ ಚಟುವಟಿಕೆಗಳನ್ನು ನಿಯಂತ್ರಿಸುವ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದೂ ಹೇಳಿತ್ತು.

ವರ್ಮಾ ಮಧ್ಯಾಹ್ನ 3ರ ಸುಮಾರಿಗೆ ಢಾಕಾದಲ್ಲಿರುವ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಗೆ ಆಗಮಿಸಿದರು. ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಶಿಮ್ ಉದ್ದೀನ್ ಅವರೊಂದಿಗಿನ ಸಭೆ ಸುಮಾರು 45 ನಿಮಿಷಗಳ ಕಾಲ ನಡೆಯಿತು ಎಂದು ತಿಳಿದು ಬಂದಿದೆ.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳು ಐತಿಹಾಸಿಕವಾಗಿ ಉತ್ತಮವಾಗಿತ್ತು. ಬಾಂಗ್ಲಾದೇಶದಲ್ಲಿ ಬಿಕ್ಕಟ್ಟಿನ ಬಳಿಕ ದೇಶ ತೊರೆದು ಶೇಕ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆ ಬಳಿಕ ಢಾಕಾದಲ್ಲಿ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ಮತ್ತು ಭಾರತದ ನಡುವಿನ ಸಂಬಂಧ ಹದಗೆಡುತ್ತಾ ಸಾಗುತ್ತಿದೆ.

ಈ ಸುದ್ದಿಯನ್ನೂ ಓದಿ:Narendra Modi: ಝಡ್-‌ಮೋರ್ಹ್‌ ಸುರಂಗ; ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ!

Leave a Reply

Your email address will not be published. Required fields are marked *