Monday, 9th December 2024

Breath Tests: ಪೈಲಟ್‌ಗಳು ವಿಮಾನದಲ್ಲಿ ಸುಗಂಧ ದ್ರವ್ಯ, ಮೌತ್ ವಾಶ್, ಟೂತ್ ಜೆಲ್ ಬಳಸುವಂತಿಲ್ಲ ಯಾಕೆ ಗೊತ್ತೇ?

Breath Tests

ವಿಮಾನಗಳ ಪೈಲಟ್‌ಗಳು (Airplane pilot) ಸುಗಂಧ ದ್ರವ್ಯ (Perfume), ಮೌತ್ ವಾಶ್ (mouth wash), ಟೂತ್ ಜೆಲ್‌ಗಳನ್ನು (tooth gel) ಬಳಸುವಂತಿಲ್ಲ. 2023ರಿಂದ ಈ ನಿಯಮ ಜಾರಿಯಲ್ಲಿಲ್ಲಿರುವುದು ಯಾಕೆ (Breath Tests) ಎನ್ನುವುದು ಗೊತ್ತಿದೆಯೇ?

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 2023ರ ಅಕ್ಟೋಬರ್‌ನಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ವಿಮಾನ ಸಿಬ್ಬಂದಿಗೆ ಆಲ್ಕೋಹಾಲ್ ಪ್ರಮಾಣ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.

ಸುಗಂಧ ದ್ರವ್ಯ, ಮೌತ್ ವಾಶ್, ಟೂತ್ ಜೆಲ್‌ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಇರುವುದರಿಂದ ಅವರು ಪರೀಕ್ಷೆಯಲ್ಲಿ ವಿಫಲರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ.

Breath test

ಡಿಜಿಸಿಎ ಮಾನದಂಡಗಳ ಅಡಿಯಲ್ಲಿ ಪ್ರತಿ ವಿಮಾನದ ಎಲ್ಲ ನಿರ್ವಾಹಕರಿಗೆ, ಸಿಬ್ಬಂದಿ ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರಿಗೆ ವಿಮಾನ ಕರ್ತವ್ಯದ ಅವಧಿಯಲ್ಲಿ ಮೊದಲ ನಿರ್ಗಮನ ವಿಮಾನ ನಿಲ್ದಾಣದಲ್ಲಿ ಪ್ರೀ-ಫ್ಲೈಟ್ ಬ್ರೀತ್ ವಿಶ್ಲೇಷಕ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಮೌತ್ ವಾಶ್, ಟೂತ್ ಜೆಲ್, ಸುಗಂಧ ದ್ರವ್ಯಗಳು ಆಲ್ಕೋಹಾಲ್‌ಯುಕ್ತ ಅಂಶವನ್ನು ಒಳಗೊಂಡಿರುತ್ತವೆ. ಇದು ವೈದ್ಯಕೀಯ ಕಾರ್ಯವಿಧಾನಕ್ಕೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಇದನ್ನು ಬಳಸದೇ ಇರಲು ಪೈಲೆಟ್ ಗಳಿಗೆ ಈಗಾಗಲೇ ಸೂಚಿಸಲಾಗಿದೆ.

Indian Raw Agent: ಪನ್ನುನ್‌ ಹತ್ಯೆಗೆ ಸಂಚು ಆರೋಪ ಹೊತ್ತಿರುವ ಮಾಜಿ ʻರಾʼ ಏಜೆಂಟ್‌ ವಿಕಾಸ್‌ ಯಾದವ್‌ ಬಗ್ಗೆ ಶಾಕಿಂಗ್‌ ಸಂಗತಿ ಲೀಕ್!

ಭಾರತದಲ್ಲಿ ಹೊರಗಿನಿಂದ ಬರುವ ಮತ್ತು ಇಲ್ಲಿಂದ ತೆರಳುವ ಪ್ರತಿ ವಿಮಾನದ ಸಿಬ್ಬಂದಿಗೂ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಅದ್ದರಿಂದ ಯಾವುದೇ ವಿಮಾನ ಸಿಬ್ಬಂದಿ ಯಾವುದೇ ಔಷಧ, ಮೌತ್‌ವಾಶ್, ಟೂತ್ ಜೆಲ್, ಸುಗಂಧ ದ್ರವ್ಯ ಅಥವಾ ಆಲ್ಕೊಹಾಲ್ಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಇವನ್ನು ಬಳಸುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.