ನವದೆಹಲಿ : ಇತ್ತೀಚೆಗೆ ತನ್ನ 4G ನೆಟ್‌ವರ್ಕ್‌ನ್ನು ವಿಸ್ತರಿಸಿರುವಲ್ಲಿ ಬಿಎಸ್‌ಎನ್‌ಲ್ (BSNL 4G Network) ಗಮನಾರ್ಹವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎದುರಾಳಿಗಳಿಗೆ ಪೈಪೋಟಿ ನೀಡಲು ಸರ್ಕಾರಿ ಸಾಮ್ಯದ ಕಂಪನಿ 50,000 ಹೊಸ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ. ಅದರಲ್ಲಿ 41,000 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಸ್‌ಎನ್‌ಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಬಿಎಸ್‌ಎನ್‌ಲ್ 4G ನೆಟ್‌ವರ್ಕ್ ಜಾರಿಗೆ ತಂದಾಗಿನಿಂದಲೂ ಎಲ್ಲೆಡೆ ಸ್ಥಾಪಿಸುವ ಗುರಿ ಹೊಂದಿದ್ದು, ಪ್ರಮುಖವಾಗಿ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಟವರ್ ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 5 ಸಾವಿರ ಟವರ್‌ಗಳು ಈಗಾಗಲೇ ತಲೆ ಎತ್ತಿವೆ. ಪ್ರಮುಖ ಪ್ರತಿಸ್ಪರ್ಧಿಗಳಾದ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ನೆಟ್‌ವರ್ಕ್ ಇಲ್ಲದೇ ಇರುವ ಪ್ರದೇಶದಲ್ಲಿಯೂ ಬಿಎಸ್‌ಎನ್‌ಲ್ ನೆಟ್‌ವರ್ಕ್ ನೀಡಿ ಸೈ ಎಂದೆನಿಸಿಕೊಂಡಿದೆ.
भारत सरकार की योजना (4G saturation project) के तहत गाँव 10 FF, #श्रीगंगानगर में #BSNL4G टावर चालू होने पर स्थानीय निवासियों में खुशी की लहर । @BSNLCorporate
— BSNL_RAJASTHAN (@BSNL_RJ) November 3, 2024
#DigitalBharat #ConnectingTheUnconnected #ConnectingBharat pic.twitter.com/OOPBbp86km
ಮುಂದಿನ ವರ್ಷದ ಜೂನ್ ವೇಳೆಗೆ ಒಟ್ಟು ಒಂದು ಲಕ್ಷ 4G ಟವರ್‌ಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ. ಈ ಮೂಲಕ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.
55 ಲಕ್ಷ ಹೊಸ ಬಳಕೆದಾರರ ಸೇರ್ಪಡೆ
ಖಾಸಗಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಹೆಚ್ಚು ಮಾಡಿರುವುದರಿಂದ ಜನರು ಬಿಎಸ್‌ಎನ್ ಕಡೆ ಮುಖ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸದರೆ ಈ ವರ್ಷ 55 ಲಕ್ಷ ಹೊಸ ಬಳಕೆದಾರರು ಬಿಎಸ್‌ಎನ್‌ಗೆ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಜಿಯೋ ಹಾಗೂ ಏರ್ಟೆಲ್ ಬೆಲೆ ಗಗನಕ್ಕೇರಿದೆ. ಹಾಗಾಗಿ ಬಿಎಸ್‌ಎನ್ ಹೊಸ ಹೊಸ ಪ್ಲಾನ್‌ಗಳನ್ನು ಜಾರಿಗೆ ತಂದಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಬಿಎಸ್‌ಎನ್‌ಲ್ ಅಭಿವೃದ್ದಿಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ 6,000 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಘೋಷಣೆ ಮಾಡಿದ್ದು, 4G ನೆಟ್‌ವರ್ಕ್ ಅಳವಡಿಕೆ ಬೇಕಾಗುವ ಅತ್ಯಾಧುನಿಕ ಸಾಮಾಗ್ರಿಗಳ ಖರೀದಿಗಾಗಿ ಕೇಂದ್ರವೇ ಆಂತರಿಕ ಬಂಡವಾಳ ಹೂಡಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Reliance Jio: ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್; ದೀಪಾವಳಿ ಕೊಡುಗೆ ಪ್ರಕಟ
ಈಗಾಗಲೆ 4G ನೆಟ್‌ವರ್ಕ್‌ನ್ನು ಎಲ್ಲಡೆ ವಿಸ್ತರಿಸುವ ಸಂಸ್ಥೆ 2025 ರಲ್ಲಿ 5G ಪ್ರಾರಂಭಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ. ನೆಟ್‌ವರ್ಕ್ ಪ್ರಯೋಗಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದ್ದು, ಅದನ್ನು ಜಾರಿಗೊಳಿಸಲು ಸಿದ್ದತೆ ನಡೆಯುತ್ತಿವೆ.