Sunday, 15th December 2024

BSNL Offers: ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಿಶೇಷ ಆಫರ್: 24ಜಿಬಿ 4ಜಿ ಡೇಟಾ ಉಚಿತ

BSNL Offers

ಈ ವರ್ಷ ತನ್ನ 24ನೇ ವಾರ್ಷಿಕೋತ್ಸವ ಆಚರಿಸಿದ ಬಿಎಸ್‌ಎನ್‌ಎಲ್ (BSNL Offers) ಈಗ ಜಿಯೋ, ಏರ್‌ಟೆಲ್‌ಗೆ (Jio and Airtel) ಸಡ್ಡು ಹೊಡೆಯಲು ಸಜ್ಜಾಗಿದೆ. ಸಾಧನೆಯ ಮೈಲಿಗಲ್ಲಿನ ನೆನಪಿಗಾಗಿ ಕಂಪನಿಯು ತನ್ನ ಗ್ರಾಹಕರಿಗೆ 24ಜಿಬಿ ಉಚಿತ ಡೇಟಾ (free data) ನೀಡುತ್ತಿದೆ. ಇದನ್ನು ಪಡೆಯುವುದು ಬಹು ಸುಲಭ. ಜಿಯೋ, ಏರ್‌ಟೆಲ್, ವೊಡಾಫೋನ್ ನಂತಹ ಖಾಸಗಿ ಆಪರೇಟರ್‌ಗಳು ಇತ್ತೀಚೆಗೆ ತಮ್ಮ ಮೊಬೈಲ್ ಸುಂಕವನ್ನು ಹೆಚ್ಚಿಸಿದ್ದರು. ಹೀಗಾಗಿ ಬಿಎಸ್‌ಎನ್‌ಎಲ್ ಕಳೆದ ಕೆಲವು ತಿಂಗಳುಗಳಲ್ಲಿ ಮತ್ತೊಮ್ಮೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಖಾಸಗಿ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ದರವನ್ನು ಶೇ. 15ರಷ್ಟು ಹೆಚ್ಚಿಸಿವೆ. ಈ ಕಾರಣದಿಂದಾಗಿ ಕೈಗೆಟುಕುವ ಬೆಲೆಯ ರೀಚಾರ್ಜ್ ಯೋಜನೆಗಳಿಂದಾಗಿ ಅನೇಕ ಚಂದಾದಾರರು ತಮ್ಮ ಸಿಮ್‌ಗಳನ್ನು ಬಿಎಸ್‌ಎನ್‌ಎಲ್‌ಗೆ ಬದಲಾಯಿಸಿದ್ದಾರೆ. ಇದೀಗ ಕಂಪೆನಿಯು ತನ್ನ ಚಂದಾದಾರರಿಗೆ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹೊಸ ಆಫರ್ ಅಡಿಯಲ್ಲಿ ಬಳಕೆದಾರರು 24ಜಿಬಿ ಡೇಟಾ ಉಚಿತವಾಗಿ ಪಡೆಯುತ್ತಾರೆ.

BSNL Offers

ಬಿಎಸ್‌ಎನ್‌ಎಲ್‌ ಈ ತಿಂಗಳು ತನ್ನ 25ನೇ ಸಂಸ್ಥಾಪನಾ ದಿನ ಆಚರಿಸುತ್ತಿದೆ. ಕಂಪೆನಿಯು ತನ್ನ 24 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದೆ. ಇದನ್ನು ಗುರುತಿಸುವ ಸಲುವಾಗಿ ಇದು ತನ್ನ ಚಂದಾದಾರರಿಗೆ 24ಜಿಬಿ ಉಚಿತ 4ಜಿ ಡೇಟಾವನ್ನು ನೀಡುತ್ತಿದೆ. 24ಜಿಬಿ ಹೆಚ್ಚುವರಿ ಡೇಟಾ ಪಡೆಯಲು ಬಯಸುವ ಬಿಎಸ್‌ಎನ್‌ಎಲ್‌ ಚಂದಾದಾರರು 500 ರೂ. ಗಿಂತ ಹೆಚ್ಚು ಮೌಲ್ಯದ ವೋಚರ್‌ಗಳೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಅಕ್ಟೋಬರ್ 1ರಿಂದ ಅಕ್ಟೋಬರ್ 24ರೊಳಗೆ ಈ ರೀಚಾರ್ಜ್ ಮಾಡಿದರೆ ಮಾತ್ರ ಈ ಸೌಲಭ್ಯ ಪಡೆಯಬಹುದು.

ಈ ಕುರಿತು ಎಕ್ಸ್ ನಲ್ಲಿ ಬಿಎಸ್‌ಎನ್‌ಎಲ್‌ ಮಾಹಿತಿ ನೀಡಿದೆ. 24 ವರ್ಷಗಳ ನಂಬಿಕೆ, ಸೇವೆ ಮತ್ತು ನಾವೀನ್ಯತೆ ಶೀರ್ಷಿಕೆಯೊಂದಿಗೆ ಬಿಎಸ್‌ಎನ್‌ಎಲ್‌ 24 ವರ್ಷಗಳಿಂದ ದೇಶವನ್ನುಸಂಪರ್ಕಿಸುತ್ತಿದೆ. ನೀವು ಇಲ್ಲದೆ ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಈ ಮೈಲಿಗಲ್ಲನ್ನು ನಮ್ಮೊಂದಿಗೆ ಆಚರಿಸಿ ಮತ್ತು 500 ರೂ. ಗಿಂತ ಹೆಚ್ಚಿನ ರೀಚಾರ್ಜ್ ವೋಚರ್‌ಗಳಲ್ಲಿ 24ಜಿಬಿ ಹೆಚ್ಚುವರಿ ಡೇಟಾವನ್ನು ಆನಂದಿಸಿ ಎಂದು ತಿಳಿಸಿದೆ.

ಸೆಪ್ಟೆಂಬರ್ 15, 2000ರಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ಅನ್ನು ಟೆಲಿಕಾಂ ಸೇವಾ ವಿಭಾಗದ ವತಿಯಿಂದ ಸ್ಥಾಪಿಸಲಾಯಿತು. ಬಳಿಕ ಇದು ದೆಹಲಿ ಮತ್ತು ಮುಂಬಯಿ ಹೊರತುಪಡಿಸಿ ದೇಶಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುವಲ್ಲಿ ಟೆಲಿಕಾಂ ಇಲಾಖೆಯ ಜವಾಬ್ದಾರಿಗಳನ್ನು ವಹಿಸಿಕೊಂಡಿದೆ.

Stock Market: ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌ 1,264.2 ಪಾಯಿಂಟ್ಸ್ ಕುಸಿತ

ಮಾರುಕಟ್ಟೆಯ ಪೈಪೋಟಿಯ ನಡುವೆ ಬಿಎಸ್‌ಎನ್‌ಎಲ್‌ ಅನ್ನು ಕಾಪಾಡಲು ಸರ್ಕಾರವು ಹಲವು ಕ್ರಮಗಳನ್ನು ಜಾರಿಗೊಳಿಸಲು ಸಂಸತ್ತಿನಲ್ಲಿ ನಿರ್ಣಯ ಕೈಗೊಂಡಿತ್ತು. ಸರ್ಕಾರದ ನಿರ್ದೇಶನದಂತೆ ಆರ್ಥಿಕವಾಗಿ ಲಾಭದಾಯಕವಲ್ಲದ ಆದರೆ ಸಾಮಾಜಿಕವಾಗಿ ಅಗತ್ಯ ಸೇವೆಗಳನ್ನು ಒದಗಿಸುವುದನ್ನು ಇದು ಖಾತ್ರಿಪಡಿಸಿತು. ಬಿಎಸ್‌ಎನ್‌ಎಲ್‌ ವಿಶ್ವ ದರ್ಜೆಯ ಐ ಎಸ್ ಒ 9000 ಪ್ರಮಾಣೀಕೃತ ಟೆಲಿಕಾಂ ತರಬೇತಿ ಸಂಸ್ಥೆಯನ್ನು ಹೊಂದಿದೆ.