Sunday, 15th December 2024

Stock Market: ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌ 1,264.2 ಪಾಯಿಂಟ್ಸ್ ಕುಸಿತ

Stock Market

ಮುಂಬೈ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಭಾರತೀಯ ಷೇರುಪೇಟೆ (Stock Market)ಯ ಮೇಲೂ ಪರಿಣಾಮ ಬೀರಿದ್ದು, ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳು ಗುರುವಾರ ತಮ್ಮ ಲಾಭವನ್ನು ಕಳೆದುಕೊಂಡು ನಷ್ಟದಲ್ಲೇ ವಹಿವಾಟು ಆರಂಭಿಸಿವೆ. ಬಿಎಸ್ಇ ಸೆನ್ಸೆಕ್ಸ್ (BSE Sensex) 1,264.2 ಪಾಯಿಂಟ್ಸ್ ಅಥವಾ ಶೇಕಡಾ 0.84ರಷ್ಟು ಕುಸಿದು 83,456ಕ್ಕೆ ತಲುಪಿದರೆ, ನಿಫ್ಟಿ 50 (Nifty50) 231 ಪಾಯಿಂಟ್ಸ್ ಅಥವಾ ಶೇಕಡಾ 0.97ರಷ್ಟು ಕುಸಿದು 25,548.4ಕ್ಕೆ ಬಂದು ಮುಟ್ಟಿದೆ.

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಆರಂಭಿಕ ಕುಸಿತ ಕಂಡಿದ್ದು, ಟಾಟಾ ಮೋಟಾರ್ಸ್, ಏಷ್ಯನ್ ಪೇಂಟ್ಸ್, ಲಾರ್ಸೆನ್ ಮತ್ತು ಟೂಬ್ರೊ, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖವಾಗಿ ಹಿನ್ನಡೆ ಅನುಭವಿಸಿದೆ.

ನಿನ್ನೆ ಮಾರುಕಟ್ಟೆ ಹೇಗಿತ್ತು?

ಭಾರತದಲ್ಲಿ ಗಾಂಧಿ ಜಯಂತಿಯ ಆಚರಣೆಗಳ ಕಾರಣದಿಂದಾಗಿ ಅಕ್ಟೋಬರ್ 2 ರಂದು ಬುಧವಾರ ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಇದರ ಹೊರತಾಗಿ, ಬಿಎಸ್‌ಇ ಸೆನ್ಸೆಕ್ಸ್ 33.49 ಪಾಯಿಂಟ್ ಅಥವಾ ಶೇಕಡಾ 0.04 ರಷ್ಟು ಕುಸಿದು 84,266.29 ಕ್ಕೆ ಕೊನೆಗೊಂಡರೆ, ನಿಫ್ಟಿ 50 13.95 ಪಾಯಿಂಟ್ ಅಥವಾ ಶೇಕಡಾ 0.05 ರಷ್ಟು ಕುಸಿದು 25,796.90 ಕ್ಕೆ ತಲುಪಿದೆ.

ಮಾರುಕಟ್ಟೆ ಕುಸಿತದ ಹಿಂದಿನ ಕಾರಣವೇನು?

ಏಷ್ಯಾ ಮಾರುಕಟ್ಟೆ ದೃಢವಾಗಿದ್ದು,ಲೆಬನಾನ್‌ನಾದ್ಯಂತ ಮುಂದುವರಿದ ಇಸ್ರೇಲ್‌ ವೈಮಾನಿಕ ದಾಳಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ. ಆ ಮೂಲಕ ಷೇರುದಾರರು ಭಾರೀ ನಷ್ಟವನ್ನು ಅನುಭವಿಸಿದ್ದಾರೆ. ಅಮೇರಿಕದಲ್ಲಿ ಉದ್ಯೋಗ ವರದಿಗೆ ಮುಂಚಿತವಾಗಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಇದು ಬಡ್ಡಿದರ ಕಡಿತಕ್ಕೆ ಫೆಡರಲ್ ರಿಸರ್ವ್‌ನ ವಿಧಾನದ ಮೇಲೆ ಪರಿಣಾಮ ಬೀರಲಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಇತ್ತೀಚಿನ ಹೇಳಿಕೆಗಳು ಕಾರ್ಮಿಕ ಮಾರುಕಟ್ಟೆ ದುರ್ಬಲಗೊಳ್ಳುತ್ತಿರುವ ಬಗ್ಗೆ ಕಳವಳ ಉಂಟು ಮಾಡಿದೆ. ಇದು ಸೆಪ್ಟೆಂಬರ್‌ನಲ್ಲಿ ಸಂಭಾವ್ಯ ದರ ಕಡಿತಕ್ಕೆ ಕಾರಣವಾಗಿದೆ. ವಿಶ್ಲೇಷಕರು 165,000 ಹೊಸ ಉದ್ಯೋಗಗಳ ಹೆಚ್ಚಳ ಮತ್ತು ನಿರುದ್ಯೋಗ ದರವು ಶೇ. 4.2ಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Stock Market: ಷೇರುಪೇಟೆಯಲ್ಲಿ ತಲ್ಲಣ; ಸೆನ್ಸೆಕ್ಸ್‌, ನಿಫ್ಟಿ ಭಾರೀ ಕುಸಿತ