ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಸ್ಪರ್ಧಾತ್ಮಕ ಬೆಲೆಯ (BSNL Offers) ರೀಚಾರ್ಜ್ ಯೋಜನೆಯನ್ನು (BSNL new plan) ಪರಿಚಯಿಸುವ ಮೂಲಕ ಜಿಯೋ (Jio), ಏರ್‌ಟೆಲ್ (Airtel), ವೊಡಾಫೋನ್ (Vodafone) ಸೇರಿದಂತೆ ಖಾಸಗಿ ದೂರಸಂಪರ್ಕ ಕಂಪನಿಗಳಿಗೆ ಸವಾಲು ಹಾಕಿದೆ. ಇದೀಗ ಬಿಎಸ್‌ಎನ್‌ಎಲ್ ಹೊಸ ಯೋಜನೆಯೊಂದನ್ನು (recharge offers) ಪ್ರಕಟಿಸಿದ್ದು, ಇದು 400 ರೂ.ಗಿಂತ ಕಡಿಮೆ ಮೊತ್ತದಲ್ಲಿ 150 ದಿನ ವ್ಯಾಲಿಡಿಟಿಯನ್ನು ಒದಗಿಸಲಿದೆ.
ಬಿಎಸ್‌ಎನ್‌ಎಲ್ ಸಂಸ್ಥೆಯು 4ಜಿ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದ್ದು, 5ಜಿ ಸೇವೆಯನ್ನು ಹೊರತರಲು ಯೋಜನೆ ರೂಪಿಸುತ್ತಿದೆ. ಇದೀಗ ಬಿಎಸ್‌ಎನ್‌ಎಲ್ ಹೆಚ್ಚು ದಿನಗಳ ಮಾನ್ಯತೆ ಇರುವ ಅವಧಿಗಳನ್ನು ಒಳಗೊಂಡಿರುವ ವಿವಿಧ ಕೈಗೆಟುಕುವ ರೀಚಾರ್ಜ್ ಆಯ್ಕೆಗಳನ್ನು ನೀಡುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಇದೀಗ ಬಿಎಸ್‌ಎನ್‌ಎಲ್‌ನ ಹೊಸ ಯೋಜನೆ 400 ರೂ. ಗಿಂತ ಕಡಿಮೆ ಮೊತ್ತದಲ್ಲಿ 150 ದಿನಗಳ ಸೇವೆಯನ್ನು ಒದಗಿಸಲಿದೆ. ಖಾಸಗಿ ಕಂಪನಿಗಳು ಈ ದರದಲ್ಲಿ ಕೇವಲ 28 ದಿನಗಳ ಯೋಜನೆ ನೀಡುತ್ತಿವೆ.
397 ರೂ. ನ ಯೋಜನೆ ವಿಶೇಷತೆ ಏನು?
397 ರೂ. ನ ಬಿಎಸ್‌ಎನ್‌ಎಲ್ ರೀಚಾರ್ಜ್ ಯೋಜನೆಯು ಜನಸಾಮಾನ್ಯರ ಕೈಗೆಟುಕಲಿದ್ದು, ಇದು ಬಳಕೆದಾರರಿಗೆ ಹೆಚ್ಚಿನ ದಿನಗಳ ಮಾನ್ಯತೆಯನ್ನು ನೀಡಲಿದೆ. ಇದರಲ್ಲಿ ಅನಿಯಮಿತ ಕರೆ, ಡೇಟಾ ಮತ್ತು ಎಸ್ ಎಂಎಸ್ ಸೇವೆಗಳಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಬಿಎಸ್‌ಎನ್‌ಎಲ್ ಅನ್ನು ಎರಡನೇ ಸಿಮ್ ಆಗಿ ಬಳಸುವ ಬಳಕೆದಾರರಿಗೆ ಈ ಕೊಡುಗೆಗಳು ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಈ ಯೋಜನೆಯಲ್ಲಿ ಬಳಕೆದಾರರು ಪ್ರಾರಂಭದ 30 ದಿನಗಳಲ್ಲಿ ರಾಷ್ಟ್ರವ್ಯಾಪಿ ಯಾವುದೇ ಮೊಬೈಲ್ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡಬಹುದು. ಅಲ್ಲದೇ 2ಜಿಬಿ ದೈನಂದಿನ ಡೇಟಾ ಪ್ರಯೋಜನ ಪಡೆಯಬಹುದು. ಬಳಿಕ ಡೇಟಾ ವೇಗವನ್ನು 40 ಕೆಬಿಪಿಎಸ್ ಗೆ ಕಡಿಮೆಗೊಳಿಸಲಾಗುತ್ತದೆ. ಸೇವೆಯ ಮೊದಲ ತಿಂಗಳು ಬಳಕೆದಾರರು ದಿನಕ್ಕೆ 100 ಉಚಿತ ಎಸ್ ಎಂಎಸ್ ಸಂದೇಶಗಳನ್ನು ಕಳುಹಿಸಬಹುದು.
ಮಾರುಕಟ್ಟೆಯಲ್ಲಿ ಮತ್ತೆ ಹೊಸ ಛಾಪು
ದೂರಸಂಪರ್ಕದಲ್ಲಿ ಬಿಎಸ್‌ಎನ್‌ಎಲ್‌ನ ಪ್ರಗತಿಗೆ ಸಂಬಂಧಿಸಿ ಕಂಪನಿಯು ಇತ್ತೀಚೆಗೆ ಹೊಸ ಲೋಗೋ ಮತ್ತು ಸ್ಲೋಗನ್ ಅನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಬಿಎಸ್‌ಎನ್‌ಎಲ್ ಏಳು ಹೊಸ ಸೇವೆಗಳನ್ನು ಪರಿಚಯಿಸಿದೆ. ದೇಶಾದ್ಯಂತ ತನ್ನ ವಾಣಿಜ್ಯ 4ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಮುಂದಿನ ವರ್ಷದ ಜೂನ್ ವೇಳೆಗೆ 5ಜಿ ಸೇವೆಗಳನ್ನು ಹೊರತರುವ ಯೋಜನೆ ನಡೆಯುತ್ತಿದೆ. ತನ್ನ ಮೊಬೈಲ್ ನೆಟ್‌ವರ್ಕ್ ಮೂಲಸೌಕರ್ಯವನ್ನು ಬಲಪಡಿಸಲು ಬಿಎಸ್‌ಎನ್‌ಎಲ್ ಒಟ್ಟು 1,00,000 ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈಗಾಗಲೇ 35,000 ಕ್ಕೂ ಹೆಚ್ಚು ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.
Mutual fund: 15X15X15 ಸೂತ್ರ ಪಾಲಿಸಿ; 15 ವರ್ಷಗಳಲ್ಲಿ ಕೋಟಿ ರೂ. ಗಳಿಸಿ!
ಬಳಕೆದಾರರು ಹೆಚ್ಚಳ
ಆಗಸ್ಟ್ ತಿಂಗಳಲ್ಲಿ ಹೊಸ ಬಳಕೆದಾರರನ್ನು ಪಡೆದ ಏಕೈಕ ಟೆಲಿಕಾಂ ಪೂರೈಕೆದಾರನಾಗಿ ಹೊರಹೊಮ್ಮಿದ ಬಿಎಸ್‌ಎನ್‌ಎಲ್ ಕಂಪೆನಿಯು 2.5 ಮಿಲಿಯನ್ ಹೊಸ ಬಳಕೆದಾರರನ್ನು ಸ್ವಾಗತಿಸಿತು. ಇದರ ನಡುವೆ ಜಿಯೋ 4 ಮಿಲಿಯನ್, ಏರ್‌ಟೆಲ್ 2.4 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿತ್ತು. ವೊಡಾಫೋನ್ ಐಡಿಯಾ ಗ್ರಾಹಕರ ಸಂಖ್ಯೆ 1.9 ಮಿಲಿಯನ್ ಕಡಿಮೆಯಾಗಿತ್ತು.