ಗೂಳಿಯೊಂದು (Bull Attack) ಪಟ್ಟಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ಉತ್ತರಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ನಡೆದಿದೆ. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಗೂಳಿಯನ್ನು ಸೆರೆ ಹಿಡಿಯಲಾಗಿದೆ. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದ 15 ಮಂದಿ ಗಾಯಗೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಜಲಾಲಾಬಾದ್ ಪಟ್ಟಣಕ್ಕೆ ದಾರಿ ತಪ್ಪಿ ಬಂದ ಗೂಳಿಯನ್ನು ಕಂಡ ಜನರು ಭಯಭೀತರಾಗಿದ್ದಾರೆ. ಇದು ಜನರನ್ನು ಬೆನ್ನಟ್ಟಿ, ಕೊಂಬುಗಳಿಂದ ಹೊಡೆದುರುಳಿಸುತ್ತಿತ್ತು. ಪಟ್ಟಣದಲ್ಲಿ ಜನದಟ್ಟಣೆಯ ಮಧ್ಯೆ ಗೂಳಿ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿ ಹಿಂದಿನಿಂದ ಬಡಿದು ನೆಲಕ್ಕೆ ಬೀಳುವಂತೆ ಮಾಡಿತು. ಅವನು ಎದ್ದೇಳುವ ಮೊದಲು ಮತ್ತೊಮ್ಮೆ ಗೂಳಿ ಆತನಿಗೆ ಹೊಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯ ಕಣ್ಣಿನ ಸುತ್ತ ರಕ್ತ ಹರಿಯಲಾರಂಭಿಸಿತ್ತು.
Video: Stray Bull Injures 15 In Uttar Pradesh, Gets Caught After 3 Hour Chase
— Shakeel Yasar Ullah (@yasarullah) November 26, 2024
A bull entered Jalalabad town of Uttar Pradesh, causing a stampede and attacking 15 people pic.twitter.com/EsSjz9hlnP
ಗೂಳಿ ಬೀದಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಸುಮಾರು 15 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ.
ಪಟ್ಟಣದಲ್ಲಿ ಸುಮಾರು ಒಂದು ಗಂಟೆಯ ಕಾಲ ಭೀತಿ ಉಂಟು ಮಾಡಿದ ಗೂಳಿಯನ್ನು ಸೆರೆ ಹಿಡಿಯಲು ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಕಾರ್ಯಾಚರಣೆ ಪ್ರಾರಂಭಿಸಿತ್ತು.
ಆದರೆ ಗೂಳಿ ನಗರಸಭೆಯ ವಾಹನದಿಂದ ತಪ್ಪಿಸಿಕೊಂಡಿತು. ಆದರೆ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಗೂಳಿಯನ್ನು ಸೆರೆ ಹಿಡಿಯಲಾಯಿತು.
ನವೆಂಬರ್ ತಿಂಗಳ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ ಗ್ರೇಟರ್ ವೆಸ್ಟ್‌ನ ಸೆಕ್ಟರ್ 16 ಬಿ, ಸೂಪರ್‌ಟೆಕ್ ಆಕ್ಸ್‌ಫರ್ಡ್ ಸ್ಕ್ವೇರ್ ಬಳಿ ಗೂಳಿಯೊಂದು ಬೈಕ್ ಮೇಲೆ ದಾಳಿ ನಡೆಸಿದ್ದರಿಂದ ಬೈಕ್ ಸವಾರ ಗಾಯಗೊಂಡಿದ್ದನು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೃಷ್ಟವಶಾತ್ ಆ ವ್ಯಕ್ತಿಗೆ ತೀವ್ರ ಗಾಯಗಳಾಗಿರಲಿಲ್ಲ.