Thursday, 12th December 2024

ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ಗೆ ಬೆಂಕಿ: ಇಬ್ಬರೂ ಸಜೀವ ದಹನ

ರಾಂಚಿ(ಜಾರ್ಖಂಡ್): ಚಾಲಕ ಮತ್ತು ಕಂಡಕ್ಟರ್ ಹಬ್ಬ ಆಚರಿಸಲೆಂದು ಬಸ್‌ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು.

ರಾತ್ರಿ ಬಸ್‌ನಲ್ಲೇ ಮಲಗಿದ್ದರು. ಈ ವೇಳೆ ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ಗೆ ಬೆಂಕಿ ತಗುಲಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬಸ್‌ನಲ್ಲಿ ಮಲಗಿದ್ದ ಚಾಲಕ-ಕಂಡಕ್ಟರ್ ಇಬ್ಬರೂ ಕೂಡ ಸಜೀವ ದಹನವಾಗಿದ್ದಾರೆ. ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬಸ್ಸಿನಲ್ಲಿ ಬೆಂಕಿಯನ್ನು ನಿಯಂತ್ರಿಸಿದರು. ಬಸ್ಸಿನೊಳಗೆ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ.