Thursday, 12th December 2024

ಒಡಿಶಾ, ಉತ್ತರಾಖಂಡ, ಕೇರಳದಲ್ಲಿ ಮೇ.31ರಂದು ಉಪಚುನಾವಣೆ

ನವದೆಹಲಿ: ಒಡಿಶಾ, ಉತ್ತರಾಖಂಡ ಮತ್ತು ಕೇರಳದಲ್ಲಿ ಖಾಲಿ ಇರುವ ಮೂರು ವಿಧಾನಸಭಾ ಸ್ಥಾನಗಳಿಗೆ ಮೇ 31 ರಂದು ಉಪಚುನಾವಣೆ ನಡೆಯ ಲಿದೆ. ಜೂನ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಒಡಿಶಾದ ಬ್ರಜರಾಜನಗರ, ಕೇರಳದ ತ್ರಿಕ್ಕಾಕರ ಮತ್ತು ಉತ್ತರಾಖಂಡದ ಚಂಪಾವತ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ವೇಳಾಪಟ್ಟಿ ಬಿಡುಗಡೆ ಯಾಗಿದೆ. ಇದೇ ತಿಂಗಳ 4ರಂದು ಆಯೋಗ ಅಧಿಸೂಚನೆ ಹೊರ ಡಿಸಲಿದೆ.

ನಾಮಪತ್ರ ಸಲ್ಲಿಸಲು ಮೇ 11 ಮತ್ತು 12 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ 16 ಕೊನೆಯ ದಿನವಾಗಿದ್ದು, ಮೇ 31 ಮಂಗಳವಾರ ಮತದಾನ ನಡೆಯಲಿದ್ದು, ಜೂನ್ 3 ರಂದು ಮತ ಎಣಿಕೆ ನಡೆಯಲಿದೆ.

ಸಿಎಂ ಪುಷ್ಕರ್ ಸಿಂಗ್ ಧಾಮಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಂಪಾವತ್ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಿಜೆಪಿ ಶಾಸಕ ಕೈಲಾಶ್ ಚಂದ್ರ ಗಹತೋಡಿ ರಾಜೀನಾಮೆ ನೀಡಿದ ನಂತರ ವಿಧಾನಸಭಾ ಸ್ಥಾನ ತೆರವಾಗಿತ್ತು.

ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೋಲನುಭವಿಸಿದರೂ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ.