Tuesday, 7th January 2025

Canara Bank Recruitment 2025: ಕೆನರಾ ಬ್ಯಾಂಕ್‌ನಲ್ಲಿದೆ 60 ಹುದ್ದೆ; ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಬ್ಯಾಂಕ್‌ ಉದ್ಯೋಗಿಯಾಗಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಬಂದೇಬಿಟ್ಟಿದೆ. ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ (Canara Bank) ಖಾಲಿ ಇರುವ 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Canara Bank Recruitment 2025). ಆಫೀಸರ್‌ ಹುದ್ದೆ ಇದಾಗಿದ್ದು, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜ. 24 (Job Guide).

ಹುದ್ದೆಗಳ ವಿವರ

ಅಪ್ಲಿಕೇಶನ್ ಡೆವಲಪರ್ – 7 ಹುದ್ದೆ
ಕ್ಲೌಡ್ ನಿರ್ವಾಹಕ – 2 ಹುದ್ದೆ
ಕ್ಲೌಡ್ ಸೆಕ್ಯುರಿಟಿ ಅನಾಲಿಸ್ಟ್ – 2 ಹುದ್ದೆ
ಡೇಟಾ ಅನಾಲಿಸ್ಟ್ – 1 ಹುದ್ದೆ
ಡೇಟಾ ಬೇಸ್ ನಿರ್ವಾಹಕ – 9 ಹುದ್ದೆ
ಡೇಟಾ ಎಂಜಿನಿಯರ್ – 2 ಹುದ್ದೆ
ಡೇಟಾ ಮೈನಿಂಗ್ ಎಕ್ಸ್‌ಪರ್ಟ್‌ – 2 ಹುದ್ದೆ
ಡೇಟಾ ಸೈಂಟಿಸ್ಟ್ – 2 ಹುದ್ದೆ
ಎತಿಕಲ್‌ ಹ್ಯಾಕರ್ & ಪೆನೆಟ್ರೇಷನ್‌ ಟೆಸ್ಟರ್‌ – 1 ಹುದ್ದೆ
ಇಟಿಎಲ್ (ಎಕ್ಸ್ಟ್ರಾಕ್ಟ್ ಟ್ರಾನ್ಸ್‌ಫಾರ್ಮ್‌ & ಲೋಡ್) ಸ್ಪೆಷಲಿಸ್ಟ್ – 2 ಹುದ್ದೆ
ಜಿಆರ್ಸಿ ವಿಶ್ಲೇಷಕ-ಐಟಿ ಆಡಳಿತ, ಐಟಿ ಅಪಾಯ ಮತ್ತು ಅನುಸರಣೆ – 1 ಹುದ್ದೆ
ಮಾಹಿತಿ ಭದ್ರತಾ ವಿಶ್ಲೇಷಕ – 2 ಹುದ್ದೆ
ನೆಟ್‌ವರ್ಕ್‌ ಅಡ್ಮಿನಿಷ್ಟ್ರೇಟರ್ – 6 ಹುದ್ದೆ
ನೆಟ್‌ವರ್ಕ್‌ ಸೆಕ್ಯುರಿಟಿ ಅನಾಲಿಸ್ಟ್ – 1 ಹುದ್ದೆ
ಆಫೀಸರ್ (ಐಟಿ) ಎಪಿಐ ಮ್ಯಾನೇಜ್‌ಮೆಂಟ್‌ – 3 ಹುದ್ದೆ
ಅಧಿಕಾರಿ (ಐಟಿ) ಡೇಟಾಬೇಸ್ / ಪಿಎಲ್ ಎಸ್‌ಕ್ಯುಎಲ್‌ – 2 ಹುದ್ದೆ
ಆಫೀಸರ್ (ಐಟಿ), ಡಿಜಿಟಲ್ ಬ್ಯಾಂಕಿಂಗ್ ಮತ್ತು ಎಮರ್ಜಿಂಗ್ ಪೇಮೆಂಟ್ಸ್ – 2 ಹುದ್ದೆ
ಪ್ಲಾಟ್ ಫಾರ್ಮ್ ನಿರ್ವಾಹಕ – 1 ಹುದ್ದೆ
ಪ್ರೈವೇಟ್‌ ಕ್ಲೌಡ್‌ & ವಿಡಬ್ಲ್ಯುವೇರ್‌ ನಿರ್ವಾಹಕ – 1 ಹುದ್ದೆ
ಎಸ್ಒಸಿ (ಭದ್ರತಾ ಕಾರ್ಯಾಚರಣೆ ಕೇಂದ್ರ) ಅನಾಲಿಸ್ಟ್‌ – 2 ಹುದ್ದೆ
ಸೊಲ್ಯುಷನ್‌ ಆರ್ಕಿಟೆಕ್ಟ್‌ – 1 ಹುದ್ದೆ
ಸಿಸ್ಟಂ ಅಡ್ಮಿನಿಷ್ಟ್ರೇಟರ್ – 8 ಹುದ್ದೆ

ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಬಿ.ಇ., ಎಂ.ಟೆಕ್‌, ಎಂಸಿಎ ಮತ್ತಿತರ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಅರ್ಜಿ ಸಲ್ಲಿಸುವವರ ಗರಿಷ್ಠ ವಯೋಮಿತಿ 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಆನ್‌ಲೈನ್‌ ಟೆಸ್ಟ್‌ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ.

Canara Bank Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (https://ibpsonline.ibps.in/cbsoaug24/)
  • ಹೆಸರು ನೋಂದಾಯಿಸಿ.
  • ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಈ ಸುದ್ದಿಯನ್ನೂ ಓದಿ: Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

Leave a Reply

Your email address will not be published. Required fields are marked *