Saturday, 14th December 2024

ಟಾಟಾ ನೆಕ್ಸಾನ್​ ಕಾರಿಗೆ ಬಸ್​ ಡಿಕ್ಕಿ: ಯುವಕರ ಸಾವು

ಜಗದಲ್‌ಪುರ: ರಾಯ್‌ಪುರ ಜಗದಲ್‌ಪುರದ ಹೆದ್ದಾರಿ ಬಳಿ ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 30ರ ಸೇತುವೆ ಬಳಿ ಈ ಘಟನೆ ನಡೆದಿದೆ.

ರಾಯ್​ಪುರ ಕಡೆಯಿಂದ ಬರುತ್ತಿದ್ದ ಟಾಟಾ ನೆಕ್ಸಾನ್​ ಕಾರಿಗೆ ಬಸ್​ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಬಸ್​ನ ಚಾಲಕ ಮತ್ತು ಕಂಡಕ್ಟರ್​ ಪರಾರಿಯಾಗಿದ್ದಾರೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಐವರು ಯುವಕ ಪೈಕಿ ನಾಲ್ವರು ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿರುವ ಓರ್ವ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹ ಗಳನ್ನು ಹೊರ ತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಬೇಕಾಗಿ ಬಂತು.

ಮೃತ ಯುವಕರು ಜಗದಲ್‌ಪುರದ ವಿವಿಧ ಸ್ಥಳಗಳಿಂದ ಬಂದಿದ್ದರೆ, ಒಬ್ಬ ಯುವಕ ಸುಕ್ಮಾ ಜಿಲ್ಲೆಯವನು ಎಂದು ಹೇಳಲಾಗುತ್ತಿದೆ.