Thursday, 21st November 2024

ಪ್ರತಿ ಮತಗಟ್ಟೆಯಲ್ಲಿ ಸುರಕ್ಷತೆಗೆ ಸಿಎಆರ್’ಎಫ್‌ ತುಕಡಿ ನಿಯೋಜಿಸಿ: ಸುಪ್ರೀಂ ಸೂಚನೆ

Supreme Court

covidನವದೆಹಲಿ: ಸುಪ್ರೀಂ ಕೋರ್ಟ್‌ ಗುರುವಾರ ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಪ್ರತಿ ಮತಗಟ್ಟೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ (ಸಿಎಆರ್ ಎಫ್‌) ಎರಡು ಹೆಚ್ಚುವರಿ ತುಕಡಿಗಳನ್ನು ತಕ್ಷಣ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ  ಸೂಚನೆ ನೀಡಿದೆ.

ಮತ ಎಣಿಕೆ ನಡೆಯುವ ಇದೇ 28ರವರೆಗೆ ಈ ತುಕಡಿಗಳು ರಾಜ್ಯದಲ್ಲಿ ಇರಬೇಕು ಎಂದೂ ಸ್ಪಷ್ಟ ಪಡಿಸಿದೆ.

ಮತದಾನ ಆರಂಭವಾದಾಗಿನಿಂದಲೂ ತಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ ಮತ್ತು ಮತಗಟ್ಟೆಗಳ ಬಳಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ನ್ಯಾಯಮೂರ್ತಿ ಗಳಾದ ಡಿ.ವೈ. ಚಂದ್ರಚೂಡ್‌, ಸೂರ್ಯಕಾಂತ್ ಮತ್ತು ವಿಕ್ರಂ ನಾಥ್‌ ಅವರನ್ನೊಳ ಗೊಂಡ ಪೀಠಕ್ಕೆ ವಿಪಕ್ಷ ಗಳಾದ ತೃಣಮೂಲ ಕಾಂಗ್ರೆಸ್‌ ಮತ್ತು ಸಿಪಿಎಂ ಪರ ವಕೀಲರು ತಿಳಿಸಿದರು.

ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಯುವಂತೆ ಮಾಡಲು ಎಲ್ಲಾ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಸೂಕ್ತ ಸಂಖ್ಯೆಯಲ್ಲಿ ಇರಬೇಕು ಎಂದು ತ್ರಿಪುರಾ ಚುನಾವಣಾ ಆಯೋಗ, ಡಿಜಿಪಿ ಮತ್ತು ಗೃಹ ಕಾರ್ಯದರ್ಶಿಗೆ ಸೂಚನೆಯನ್ನೂ ನೀಡಿತು.