Sunday, 15th December 2024

ರಸ್ತೆ ಅಪಘಾತವಾದಾಗ ಸಹಾಯಕ್ಕೆ ಬರುವವರಿಗೆ ಬಹುಮಾನ: ಎಂ.ಕೆ.ಸ್ಟಾಲಿನ್

ಚೆನ್ನೈ; ರಸ್ತೆ ಅಪಘಾತವಾದಾಗ ಸಹಾಯಕ್ಕೆ ಬರುವವರಿಗಿಂತ ದೂರ ಹೋಗು ವವರೇ ಹೆಚ್ಚು. ಆದರೆ ಅಪಘಾತ ಸಂದರ್ಭದಲ್ಲಿ ಸಹಾಯ ಮಾಡುವ ಜನರಿಗೆ ತಮಿಳುನಾಡು ಸರ್ಕಾರ ಬಹುಮಾನ ನೀಡಲು ಮುಂದಾಗಿದೆ.

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹೀಗೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವ ಜನರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಘೋಷಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವವರು ಮತ್ತು ಗೋಲ್ಡನ್ ಅವರ್ ಅವಧಿಯಲ್ಲಿ ಅವರನ್ನು ವೈದ್ಯಕೀಯ ಆರೈಕೆ ಸೌಲಭ್ಯಕ್ಕೆ ಕರೆದೊಯ್ಯುವವರಿಗೆ ಪ್ರಶಂಸಾ ಪತ್ರ ಮತ್ತು 5,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ ಎಂದಿದ್ದಾರೆ.

ರಾಜ್ಯದಾದ್ಯಂತ 609 ಆಸ್ಪತ್ರೆಗಳು 408 ಖಾಸಗಿ ಆಸ್ಪತ್ರೆಗಳು ಮತ್ತು 201 ಸರ್ಕಾರಿ ಆಸ್ಪತ್ರೆಗಳು ಗೋಲ್ಡನ್ ಅವರ್‌ನಲ್ಲಿ ವೈದ್ಯ ಕೀಯ ಸೇವೆಯನ್ನು ಒದಗಿಸಲು ಮತ್ತು ಜೀವಗಳನ್ನು ಉಳಿಸಲು ಜಾಲಬಂಧ ಹೊಂದಿವೆ. ಈ ಯೋಜನೆಯು ಸುಮಾರು 81 ಮಾನ್ಯತೆ ಪಡೆದ ಸಂತ್ರಸ್ತರಿಗೆ ಗರಿಷ್ಠ ಒಂದು ಲಕ್ಷ ರೂ.ವರೆಗಿನ ರಕ್ಷಣೆಯನ್ನು ನೀಡುತ್ತದೆ.