Thursday, 12th December 2024

ಸಿಬಿಎಸ್‌ಇ 12ನೇ ಬೋರ್ಡ್ ಪರೀಕ್ಷೆ ಭವಿಷ್ಯ ಇಂದು ನಿರ್ಧಾರ ?

ನವದೆಹಲಿ: ಸಿಬಿಎಸ್‌ಇ 12ನೇ ಬೋರ್ಡ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ಮಹತ್ವದ ಸಭೆ ನಡೆಸಲಿದ್ದಾರೆ.

ಎಲ್ಲಾ ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಭೆಯಲ್ಲಿ ವ್ಯಾಪಕ ಚರ್ಚೆಯ ನಂತರ ಸಾಧ್ಯವಿರುವ ಎಲ್ಲಾ ಆಯ್ಕೆಗಳನ್ನ ಅವರಿಗೆ ವಿವರಿಸ ಲಾಗುವುದು. ಈ ಹಿಂದೆ ಕೇಂದ್ರ ಸರ್ಕಾರ ಕರೋನಾ ಬಿಕ್ಕಟ್ಟಿನಿಂದಾಗಿ ಸಿಬಿಎಸ್‌ಇ 10ನೇ ಮಂಡಳಿಯ ಪರೀಕ್ಷೆಯನ್ನ ರದ್ದುಗೊಳಿಸಿ 12ನೇ ತರಗತಿ ಪರೀಕ್ಷೆಯನ್ನ ಜೂನ್ 1 ರಂದು ನಿರ್ಧರಿಸಲಾಗುವುದು ಎಂದು ಹೇಳಿತ್ತು.

12ನೇ ತರಗತಿ ಮಂಡಳಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇಂದು ಸಂಜೆ ಪ್ರಮುಖ ಸಭೆ ನಡೆಯಲಿದ್ದು, ಈ ಸಭೆಯ ಅಧ್ಯಕ್ಷತೆ ಯನ್ನ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಸಭೆಯ ನಂತ್ರ 10ನೇ ತರಗತಿ ಪರೀಕ್ಷೆಯಂತೆ 12ನೇ ತರಗತಿ ಪರೀಕ್ಷೆಯನ್ನೂ ರದ್ದು ಮಾಡಲಾಗುತ್ತಾ ಅಥವಾ ಪರೀಕ್ಷೆಗೆ ಸೂಕ್ತ ದಿನಾಂಕ ಪ್ರಕಟಿಸಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಮಧ್ಯೆ 12ನೇ ತರಗತಿ ಮಂಡಳಿ ಪರೀಕ್ಷೆಗಳನ್ನು ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸುವ ಒಂದು ದಿನ ಮೊದಲು ತಿಳಿದುಬಂದಿದೆ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಿದರು.