Saturday, 14th December 2024

ಇಂದು ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುಗಡೆ

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ 12 ನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಬಿಎಸ್ಇ, ವಿದ್ಯಾರ್ಥಿಗಳು cbseresults.nic.in ನಲ್ಲಿ 12 ನೇ ತರಗತಿ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ. ಸಿಬಿಎಸ್ಇ 12 ನೇ ಫಲಿತಾಂಶವನ್ನು ಮಧ್ಯಾಹ್ನ ಘೋಷಿಸಲಾಗುವುದು. ಈ ವರ್ಷ, ಸಿಬಿಎಸ್‌ಇ 12 ನೇ ಫಲಿತಾಂಶಗಳನ್ನು ಪರ್ಯಾಯ ರೀತಿಯಲ್ಲಿ ತಯಾರಿಸಲಾಗಿದೆ.

ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಈ ವರ್ಷ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಫಲಿತಾಂಶ ಅಂತಿಮಗೊಳಿಸಲು ಮಂಡಳಿಯು ಪರ್ಯಾಯ ಮೌಲ್ಯಮಾಪನ ಯೋಜನೆ ಅಳವಡಿಸಿಕೊಂಡಿತ್ತು.