Thursday, 12th December 2024

ಕೋವಿಡ್-19 ಪತ್ತೆಹಚ್ಚಲು ಕೇಂದ್ರದಿಂದ ವಿಶೇಷ ತಂಡ ಕಾರ್ಯಾಚರಣೆ

ನವದೆಹಲಿ: ಕೊರೊನಾ ವೈರಸ್ ಸೋಂಕು ಇರುವಿಕೆಯನ್ನು ಪತ್ತೆ ಹಚ್ಚಲು ಹಾಗೂ ಈ ಕುರಿತು ಮುನ್ನೆಚ್ಚರಿಕೆ ವಹಿಸಲು ಕೇಂದ್ರದಿಂದಲೇ ಒಂದು ವಿಶೇಷ ತಂಡವು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ರಾಜಸ್ಥಾನ, ಛತ್ತೀಸ್ ಘಡ, ಪಶ್ಚಿಮ ಬಂಗಾಳ ಮುಂತಾದೆಡೆ ಕಾರ್ಯಾಚರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಐದು ರಾಜ್ಯಗಳಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಪ್ರತಿ ತಂಡದಲ್ಲೂ ನೋಡಲ್ ಆಫೀಸರ್‌ ಇರುತ್ತಾರೆ. ಅವರು ಜಂಟಿ ಕಾರ್ಯದರ್ಶಿ ಕೂಡ ಹೌದು. ತಂಡದಲ್ಲಿ ಓರ್ವ ಸಾರ್ವ ಜನಿಕ ಆರೋಗ್ಯ ಪರಿಣತ, ಓರ್ವ ಔಷಧಿ ನೀಡುವವರಿರುತ್ತಾರೆ.

ಈ ಐದು ರಾಜ್ಯಗಳ ಪೈಕಿ, ಕೇರಳದಲ್ಲಿ 317929 ಪ್ರಕರಣಗಳು ದಾಖಲಾಗಿವೆ. 222231 (69.90 %) ಗುಣಮುಖರು, ಮೃತಪಟ್ಟವರ ಸಂಖ್ಯೆ 1089.  ಕರ್ನಾಟಕದಲ್ಲಿ 743848 ಪ್ರಕರಣಗಳು ದಾಖಲಾಗಿವೆ. 620008 ಸೋಂಕಿತರು ಗುಣಮುಖರಾಗಿದ್ದಾರೆ. 113557 ಪ್ರಕರಣಗಳು ಚಿಕಿತ್ಸೆಯ ಹಂತದಲ್ಲಿವೆ. ರಾಜಸ್ಥಾನದಲ್ಲಿ 167279 ಪ್ರಕರಣಗಳು ದಾಖಲಾಗಿವೆ. 143984 ಸೋಂಕಿತರು ಗುಣಮುಖರಾಗಿದ್ದಾರೆ. 21587 ಸೋಂಕಿತರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವುಗಳ ಹೊರತಾಗಿ, ಪಶ್ಚಿಮ ಬಂಗಾಳದಲ್ಲಿ 309417 ಪ್ರಕರಣಗಳು ಹಾಗೂ ಛತ್ತೀಸ್ ಗಢದಲ್ಲಿ 153515 ಪ್ರಕರಣಗಳು ದಾಖಲಾಗಿವೆ.