Saturday, 12th October 2024

ಚೀನಾದಿಂದ ಮರಳಿದ ಮಹಿಳೆ, ಮಗಳಿಗೆ ಕೋವಿಡ್ ಸೋಂಕು ದೃಢ

ಚೆನ್ನೈ: ಕೊಲಂಬೋ ಮೂಲಕ ಚೀನಾದಿಂದ ಹಿಂದಿರುಗಿದ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳಿಗೆ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣದಲ್ಲಿ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿರುಧುನಗರ ಮೂಲದ ಮಹಿಳೆ ಮತ್ತು ಅವರ ಮಗಳನ್ನು ಮಂಗಳವಾರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಯಿತು.

ಇಬ್ಬರೂ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಅವರ ಮಾದರಿಗಳನ್ನು ಸಂಪೂರ್ಣ ಜೀನೋ ಮಿಕ್ ಸೀಕ್ವೆನ್ಸಿಂಗ್ಗಾಗಿ ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವರದಿ ತಿಳಿಸಿದೆ.

ಮಂಗಳವಾರ, ತಮಿಳುನಾಡಿನಲ್ಲಿ 10 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 51 ರಷ್ಟಿದೆ.

Read E-Paper click here