Tuesday, 26th November 2024

Chinmoy Krishna Das: ಹಿಂದೂ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಪ್ರಭುಗೆ ಜಾಮೀನು ನಿರಾಕರಣೆ… ದೇಶದ್ರೋಹ ಕೇಸ್‌ ದಾಖಲು

Chinmoy Krishna Das

ಢಾಕಾ : ದೇಶದ್ರೋಹದ ಆರೋಪ ಮೇಲೆ ಬಂಧಿತರಾಗಿರುವ ಬಾಂಗ್ಲಾದೇಶದ ಹಿಂದೂ ಧಾರ್ಮಿಕ (Bangladeshi Hindu Monk) ಮುಖಂಡ, ಇಸ್ಕಾನ್‌ ದೇಗುಲಗಳ ಆಡಳಿತ ಮಂಡಳಿ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ ಪ್ರಭು (Chinmoy Krishna Das) ಅವರಿಗೆ ಮಂಗಳವಾರ ಚಿತ್ತಗಾಂಗ್‌ನ ಮೆಟ್ರೋಪಾಲಿಟನ್ ಮೆಜಿಸ್ಟ್ರೇಟ್ ನ್ಯಾಯಾಲಯವು ಜಾಮೀನನ್ನು ತಿರಸ್ಕರಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಅನೇಕ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಸನ್ಯಾಸಿ ಪ್ರಭು ಅವರನ್ನು ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್ ನವೆಂಬರ್ 25 ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ಬಾಂಗ್ಲಾದೇಶದಲ್ಲಿ ಹಿಂದೂ ಪರ ಪ್ರತಿಭಟನೆ ಮಾಡುವ ಪ್ರಮುಖ ಮುಖಂಡರಾಗಿರುವ ಅವರನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗಿದೆ ಹಾಗೂ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಅವರು ಪ್ರತಿಭಟನೆ ನಡೆಸಿದ್ದರು. ಸೋಮವಾರ, ದಾಸ್ ಬಂಧನದ ನಂತರ, ಢಾಕಾ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಬಂಧನದ ನಂತರ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಾಮನ್ ದಾಸ್ ಪ್ರತಿಕ್ರಿಯಿಸಿದ್ದು, ಪ್ರಭು ವಿರುದ್ಧದ ಆಧಾರರಹಿತವಾಗಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದಾರೆ. ಬಂಧನಕ್ಕೂ ಮೊದಲು ಯಾವುದೇ ಕಾರಣವನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವ  ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್‌ ಮಾಡಿದ ಅವರು ಈ ಕಷ್ಟದ ಸಮಯದಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಢಾಕಾ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರನ್ನು ಅಜ್ಞಾತ ಸ್ಥಳದಲ್ಲಿರಿಸಲಾಗಿದೆ ಎಂಬ ಸುದ್ದಿ ದೊರೆತಿದೆ ದಯವಿಟ್ಟು ಗಮನ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

ಯಾರು ಈ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ?

ಕೃಷ್ಣ ದಾಸ್ ಪ್ರಭು ಅವರು ಬಾಂಗ್ಲಾದೇಶದ ಪ್ರಮುಖ ಹಿಂದೂ ನಾಯಕ. ಅವರು ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜೋತೆ ಎಂಬ ಹಿಂದೂ ಗುಂಪಿನ ಪ್ರಮುಖ ನಾಯಕರಾಗಿರುವ, ಅವರು ದೇಶದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಅಕ್ಟೋಬರ್‌ನಲ್ಲಿ ಇವರ ಮೇಲೆ ಕೇಸ್‌ ದಾಖಲಿಸಲಾಗಿತ್ತು.

ಇದನ್ನೂ ಓದಿ : Viral News: 7 ದಿನಗಳಲ್ಲಿ ದೇಶ ಬಿಟ್ಟು ತೊಲಗಿ; ಬಾಂಗ್ಲಾದೇಶದ ಹಿಂದೂಗಳಿಗೆ ಬೆದರಿಕೆ