ಪ್ರತಿ ವರ್ಷ ಡಿಸೆಂಬರ್ (December) 25 ರಂದು ಪ್ರಪಂಚದಾದ್ಯಂತ ಜನರು ಕ್ರಿಸ್ಮಸ್ (Christmas) ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ರೇಲ್ (Israel), ಆಸ್ಟ್ರೇಲಿಯಾ (Australia), ಅಮೆರಿಕ (America), ಬ್ರಿಟನ್ (Great Britain), ಜಪಾನ್ (Japan), ಚೈನಾ (China), ಈಜಿಪ್ಟ್ (Egypt), ರಷ್ಯಾ (Russia), ರೊಮೊನಿಯಾ (Romania), ಭಾರತ (India) ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತವೆ. ಕ್ರಿಸ್ಮಸ್ ಹಿಂದಿನ ದಿನ, ಅಂದರೆ ಡಿಸೆಂಬರ್ 24ನ್ನು ಕ್ರಿಸ್ಮಸ್ ಈವ್ (Christmas Eve) ಎಂದು ಆಚರಿಸಲಾಗುತ್ತದೆ. ಇದು ಸಂತೋಷ, ಸಾಮರಸ್ಯದೊಂದಿಗೆ ಆಚರಿಸಲಾಗುತ್ತದೆ(Christmas).
ಯೇಸು ಕ್ರಿಸ್ತರು (Jesus Christ) ಜನಿಸಿದ ದಿನವನ್ನು ಕ್ರಿಸ್ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ (Christmas Tree) ಹಾಗೂ ಹೂವುಗಳಿಂದ ಅಲಂಕರಿಸುತ್ತಾರೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿಯುತ್ತಾರೆ.
ಕ್ರಿಸ್ಮಸ್ ಹಬ್ಬ ಯಾವಾಗ?
ಬಹುತೇಕ ಕ್ರಿಶ್ಚಿಯನ್ನರು ಗ್ರೆಗೋರಿಯನ್ ಕ್ಯಾಲೆಂಡರ್ (Gregorian calendar) ಪ್ರಕಾರ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಜೀಸಸ್ ಯಾವಾಗ ಜನಿಸಿದರು ಎಂಬುದಕ್ಕೆ ಇತರೆ ಸಿದ್ಧಾಂತಗಳಿವೆ, ಆದರೆ ನಾಲ್ಕನೇ ಶತಮಾನದ ಆರಂಭದಲ್ಲಿ ಅಂದರೆ ಡಿಸೆಂಬರ್ 25ರಂದು ಅಧಿಕೃತ ದಿನಾಂಕವಾಗಿ ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿವರ್ಷ ಡಿಸೆಂಬರ್ 25ರಂದು ಪ್ರತಿವರ್ಷ ಆಚರಿಸಲಾಗುತ್ತಿದೆ.
ಕ್ರಿಸ್ಮಸ್ ಹಬ್ಬದ ಮಹತ್ವ
ಕ್ರಿಸ್ಮಸ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯೇಸುವಿನ ಜನ್ಮದಿನದಂದು ಈ ಪವಿತ್ರ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಯೇಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ. ಈ ದಿನದಂದು ಜನರು ಚರ್ಚ್ಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಮಾಡುತ್ತಾರೆ. ಕ್ರಿಸ್ಮಸ್ ಡಿ. 25 ರಂದು ಗ್ರೆಗೋರಿಯನ್ ಕ್ಯಾಲೆಂಡರ್ ಮೂಲಕ ಆಚರಿಸಲಾಗುತ್ತದೆ. ಇದು ರೋಮನ್ ಕ್ಯಾಲೆಂಡರ್ನಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯ ಸಾಂಪ್ರದಾಯಿಕ ದಿನಾಂಕವಾಗಿದೆ.
ಕ್ರಿಸ್ಮಸ್ ಪದವು “ಮಾಸ್ ಆಫ್ ಕ್ರೈಸ್ಟ್” (Mass of Christ) ಎಂಬ ಪದದಿಂದ ಹುಟ್ಟಿಕೊಂಡಿದೆ. ಮೊದಲ ಕ್ರಿಶ್ಚಿಯನ್ ಚಕ್ರವರ್ತಿ ರೋಮನ್ ಚಕ್ರವರ್ತಿ ತನ್ನ ಆಳ್ವಿಕೆಯಲ್ಲಿ ಕ್ರಿಸ್ಮಸ್ನ್ನು ಮೊಟ್ಟಮೊದಲ ಬಾರಿಗೆ ಆಚರಿಸಿದನು.
ಈ ದಿನದಂದು ಜನರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಿಕೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಕ್ಯಾರೋಲಿಂಗ್, ಕ್ರಿಸ್ಮಸ್ ಟ್ರೀ ಅಲಂಕರಣ, ಮತ್ತು ಸಾಂಟಾ ಕ್ಲಾಸ್ ಸಾಕಷ್ಟು ಜನಪ್ರಿಯವಾಗಿರುವ ಕೆಲವು ಆಚರಣೆಗಳಾಗಿವೆ.
ಇತಿಹಾಸ
ಜೋಸೆಫ್ ಮತ್ತು ಮೇರಿಗೆ ಬೆಥ್ ಲೆಹೆಮ್ನಲ್ಲಿ (Bethlehem) ಜನಿಸಿದ ಯೇಸು ಕ್ರಿಸ್ತ ಜನಿಸುತ್ತಾರೆ. ಕ್ರಿಸ್ತನು ಪವಿತ್ರಾತ್ಮದ ಮೂಲಕ ಗರ್ಭಧರಿಸಿದನೆಂದು ನಂಬಲಾಗಿದೆ. ಆದಾಗ್ಯೂ, ಅವರು ಡಿಸೆಂಬರ್ 25 ರಂದು ಜನಿಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಪ್ರಪಂಚದಾದ್ಯಂತ ವಿಭಿನ್ನ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಜರ್ಮನಿಯಲ್ಲಿ ಯುಲೆಟೈಡ್, ಸ್ಪ್ಯಾನಿಷ್ನಲ್ಲಿ ನವಿಡಾಡ್, ಇಟಾಲಿಯನ್ನಲ್ಲಿ ನಟಾಲ್ ಮತ್ತು ಫ್ರೆಂಚ್ನಲ್ಲಿ ನೋಯೆಲ್ ಎಂದು ಕರೆಯಲಾಗುತ್ತದೆ. ಈ ದಿನ ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದ್ದು, ಜನರನ್ನು ಅವರ ಪಾಪಗಳಿಂದ ವಿಮೋಚನೆಗೊಳಿಸಲು ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ ಎಂಬ ನಂಬಿಕೆ ಇದೆ.
ಈ ಸುದ್ದಿಯನ್ನೂ ಓದಿ: Christmas: ಕರುಣೆ, ಪ್ರೇಮದ ಸಂದೇಶ ಸಾರುವ ಕ್ರಿಸ್ಮಸ್; ಶಾಂತಿದೂತನ ಆಗಮನದ ನೆನಪಿನ ಹಬ್ಬ