Thursday, 14th November 2024

CJI Sanjiv Khanna: ಕಣ್ಮರೆಯಾಗಿರುವ ಪೂರ್ವಜರ ಮನೆಯ ಹುಡುಕಾಟದಲ್ಲಿದ್ದಾರೆ ಭಾರತದ ನೂತನ CJI ಸಂಜೀವ್ ಖನ್ನಾ!

CJI Sanjiv Khanna

ನವದೆಹಲಿ: ದೇಶದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (Chief Justice Of India) ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ (CJI Sanjiv Khanna) ಅವರು ಅಮೃತಸರದಲ್ಲಿರುವ ತಮ್ಮ ಪೂರ್ವಜರ ಮನೆಯನ್ನು ಹುಡುಕುತ್ತಿದ್ದು, ಸದ್ಯ ಅದರ ಜಾಡು ಹಿಡಿದು ಹೊರಟಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಮನೆಯನ್ನು ಅವರ ಅಜ್ಜ ಸರವ್ ದಯಾಳ್ ನಿರ್ಮಿಸಿದರು.

ಸಂಜೀವ್ ಖನ್ನಾ ಅವರು ಅಮೃತಸರಕ್ಕೆ (Amritsar) ಭೇಟಿ ನೀಡಿದಾಗಲೆಲ್ಲ ಕತ್ರಾ ಶೇರ್ ಸಿಂಗ್ ಗೆ ಭೇಟಿ ನೀಡುತ್ತಾರೆ. ಒಂದು ಕಾಲದಲ್ಲಿ ಇದು ತೀರ್ಥಯಾತ್ರೆ ಕ್ಷೇತ್ರವಾಗಿದ್ದು, ಕಾಲಾನಂತರದಲ್ಲಿ ಬದಲಾಗಿದೆ. ಈಗಲೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವ ನ್ಯಾಯಮೂರ್ತಿ ಖನ್ನಾ ಅವರು ತಮ್ಮ ಅಜ್ಜ ನಿರ್ಮಿಸಿದ ಮನೆಯನ್ನು ಹುಡುಕಾಟ ನಡೆಸುತ್ತಲೇ ಇದ್ದಾರೆ.

ಸಂಜೀವ್ ಖನ್ನಾ ಅವರ ತಾತ, ನ್ಯಾಯಮೂರ್ತಿ ಎಚ್‌.ಆರ್. ಖನ್ನಾ ಅವರ ತಂದೆ ಸರವ್ ದಯಾಲ್ ಅವರು ಆಗಿನ ಕಾಲದಲ್ಲಿ ಪ್ರಸಿದ್ಧ ವಕೀಲರಾಗಿದ್ದರು. 1919ರ ಜಲಿಯನ್ ವಾಲಾಬಾಗ್ ಘಟನೆಗಾಗಿ ರಚಿಸಲಾದ ಕಾಂಗ್ರೆಸ್ ಸಮಿತಿಯಲ್ಲಿ ಅವರೂ ಕೂಡ ಸದಸ್ಯರಾಗಿದ್ದರು.

CJI Sanjiv Khanna

ಆ ಸಮಯದಲ್ಲಿ ಅವರು ಎರಡು ಮನೆಗಳನ್ನು ಖರೀದಿ ಮಾಡಿದ್ದರು. ಒಂದು ಜಲಿಯನ್ ವಾಲಾ ಬಾಗ್ ಬಳಿಯ ಕತ್ರಾ ಶೇರ್ ಸಿಂಗ್‌ನಲ್ಲಿ ಮತ್ತು ಎರಡನೆಯದು ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ. ಕತ್ರಾ ಶೇರ್ ಸಿಂಗ್ ಮನೆಯನ್ನು ಇದೀಗ ಪತ್ತೆ ಮಾಡಲು ನ್ಯಾಯಮೂರ್ತಿ ಖನ್ನಾ ಅವರು ಪ್ರಯತ್ನಿಸುತ್ತಿದ್ದಾರೆ. 1947ರ ಸ್ವಾತಂತ್ರ್ಯದ ಸಮಯದಲ್ಲಿ ಕತ್ರಾ ಶೇರ್ ಸಿಂಗ್ ಮನೆಯನ್ನು ಅಪವಿತ್ರಗೊಳಿಸಲಾಯಿತು ಮತ್ತು ಬೆಂಕಿ ಹಚ್ಚಲಾಯಿತು. ಆದರೆ ಅನಂತರ ಅವರ ಅಜ್ಜ ಅದನ್ನು ಪುನರ್ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಐದು ವರ್ಷದವರಿದ್ದಾಗ ಒಮ್ಮೆ ತಮ್ಮ ತಂದೆಯೊಂದಿಗೆ ಆ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿ ‘ಬೌಜಿ’, ಅಂದರೆ “ಅಜ್ಜ” ಎಂದು ಬರೆಯುವ ಫಲಕವಿತ್ತು. ಈ ಚಿಹ್ನೆಯನ್ನು ಇನ್ನೂ ಡಾಲ್ ಹೌಸಿಯ ಮನೆಯಲ್ಲಿ ಇರಿಸಲಾಗಿದೆ. ಮೂಲಗಳ ಪ್ರಕಾರ, ಸರವ್ ದಯಾಳ್ ಅವರ ಮರಣದ ಅನಂತರ ಅಮೃತಸರದ ಮನೆಯನ್ನು 1970ರಲ್ಲಿ ಮಾರಾಟ ಮಾಡಲಾಗಿದೆ.

Kolkata Horror : ಕೊಲ್ಕತ್ತಾದ ಆರ್‌ಜಿ ಕರ್‌ ಕಾಲೇಜಿನ ಸಂತ್ರಸ್ತೆಯ ಪ್ರತಿಮೆ ಧ್ವಂಸ

ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ಇಂದಿಗೂ ಆ ಮನೆಯನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಅವರು ಅಮೃತಸರಕ್ಕೆ ಹೋದಾಗಲೆಲ್ಲ ಕತ್ರಾ ಶೇರ್ ಸಿಂಗ್ ಗೆ ಭೇಟಿ ಮಾಡಿ ಆ ಮನೆಯನ್ನು ಹುಡುಕಲು ಪ್ರಯತ್ನಿಸುತ್ತಾರೆ.
ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ತಮ್ಮ ತಾತ ರಜಾ ದಿನಗಳಲ್ಲಿ ಶಾಲಾ ಪುಸ್ತಕಗಳನ್ನು ತರಬೇಡಿ ಎಂದು ಹೇಳುತ್ತಿದ್ದರು ಎಂಬುದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ನೀಡುವ ಶಿಕ್ಷಣವು ಯಾವ ಪುಸ್ತಕಗಳಲ್ಲಿಯೂ ಇಲ್ಲ ಎನ್ನುತ್ತಿದ್ದರು.