Friday, 18th October 2024

ಪರಸ್ಪರ ಸಂವಹನಕ್ಕೆ ಹಿಂದಿಯಲ್ಲಿ ಮಾತಾಡಿ: ಅಮಿತ್ ಶಾ

ನವದೆಹಲಿ: ರಾಜ್ಯದವರು ಪರಸ್ಪರ ಸಂವಹನ ನಡೆಸುವಾಗ ಹಿಂದಿಯಲ್ಲಿ ಮಾತಾಡಬೇಕೆ ಹೊರತು ಇಂಗ್ಲೀಷ್ ನಲ್ಲಿ ಅಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸರ್ಕಾರವನ್ನು ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.

ಹಿಂದಿಯ ಮಹತ್ವ ಹೆಚ್ಚಾಗಲಿದೆ. ಅಧಿಕೃತ ಭಾಷೆಯನ್ನು ದೇಶದ ಒಗ್ಗಟ್ಟಿನ ಪ್ರಮುಖ ಭಾಗವನ್ನಾಗಿಸುವ ಸಮಯ ಬಂದಿದೆ ಎಂದು ಅಮಿತ್ ಶಾ ಸಂಸದೀಯ ಅಧಿಕೃತ ಭಷಾ ಸಮಿತಿಯ 37 ನೇ ಸಭೆಯಲ್ಲಿ ಭಾಗವಹಿಸಿ ಹೇಳಿದ್ದಾರೆ.

ಹಿಂದಿಯನ್ನು ಇಂಗ್ಲೀಷ್ ಗೆ ಪರ್ಯಾಯವನ್ನಾಗಿ ಬೆಳೆಸಬೇಕು ಆದರೆ ಸ್ಥಳೀಯ ಭಾಷೆಗಳಿಗೆ ಪರ್ಯಾಯವಾಗಿ ಅಲ್ಲ. ಅಮಿತ್ ಶಾ ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿದ್ದು ಬಿಜೆಡಿಯ ಬಿ ಮಹ್ತಾಬ್ ಉಪಾಧ್ಯಕ್ಷರಾಗಿದ್ದಾರೆ.