ನವದೆಹಲಿ: ಮಾತನಾಡುವಾಗ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ ಬಾಯಿಗೆ ಬಂದಂತೆ ಮಾತನಾಡಿ, ವಿಪಕ್ಷಗಳಿಗೆ ಆಹಾರವಾಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸದರಿಗೆ ಮತ್ತೆ ಚಾಟಿ ಬೀಸಿದ್ದಾರೆ.
ಎನ್‍ಡಿಎ ಮೈತ್ರಿಕೂಟಗಳ ಸಂಸದರನ್ನುದ್ದೇಶಿಸಿ ಮಾತನಾಡಿ, ನಿಮಗೆ ಮಾಹಿತಿ ಇಲ್ಲದ ಯಾವುದೇ ವಿಷಯಗಳನ್ನು ನೀವು ಮಾತನಾಡಬೇಡಿ ಆದಷ್ಟು ವಿವಾದಾತ್ಮಕ ಹೇಳಿಕೆ ಯಿಂದ ದೂರ ಇರಿ ಎಂದು ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ವಿಕ್ಷಗಳು ನಿಮ್ಮನ್ನು ಗುರಿಯಾಗಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಪ್ರಚೋದನೆ ಮಾಡುತ್ತದೆ. ನೀವು ಪ್ರತಿ ಯೊಂದಕ್ಕೂ ಹೇಳಿಕೆ ಕೊಟ್ಟುಕೊಂಡು ಹೋದರೆ ವಿವಾದಕ್ಕೆ ಸಿಲುಕುತ್ತೀರಿ. ಹೀಗಾಗಿ ಎಚ್ಚರಿಕೆಯಿಂದಿರಿ ಎಂದು ಕಿವಿಮಾತು ಹೇಳಿದ್ದಾರೆ. ಪ್ರತಿಪಕ್ಷಗಳು ಹತಾಷೆಗೊಂಡು ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ.
ಸಂಸದ್ ಸದಸ್ಯರು ಮಾತನಾಡುವಾಗ ಜವಾಬ್ದಾರಿಯಿಂದ ಇರಬೇಕು. ನಿಮ್ಮ ಒಂದೊಂದು ಮಾತಿಗೂ ಕೂಡ ಮೌಲ್ಯ ಇರುತ್ತದೆ. ವಿರೋಧಪಕ್ಷಗಳ ಬಲೆಗೆ ಬೀಳಬೇಡಿ ಆದಷ್ಟು ಲೋಗೋಗಳಿಂದ (ಟಿವಿ ಮೈಕ್) ದೂರ ಇರಿ. ಪ್ರತಿಯೊಂದಕ್ಕೂ ಉತ್ತರಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಅವರು ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಹತ್ಯೆಮಾಡಿದ ಕುರಿತು ನೀಡಿದ ಹೇಳಿಕೆಗಳು ಸಾಕಷ್ಟು ಮುಜುಗರ ತಂದಿದ್ದವು. ಇಂತಹ ಹೇಳಿಕೆಗಳನ್ನು ನಾವು ಇಂತಹ ಹೇಳಿಕೆ ಗಳನ್ನು ಎಂದಿಗೂ ಬೆಂಬಲಿಸಬಾರದು. ಏನೇ ಮಾತನಾಡಿದ್ದರೂ ತುಂಬಾ ಎಚ್ಚರಿಕೆಯಿಂದಿರಬೇಕೆಂದು ತಿಳಿಸಿದ್ದಾರೆ.