Sunday, 15th December 2024

ಒಂದೇ ದಿನ 3,285 ಜನರನ್ನು ಬಲಿ ತೆಗೆದುಕೊಂಡ ಕರೋನಾ

#corona

ನವದೆಹಲಿ: ಕರೋನಾ ಸೋಂಕು, ಮಂಗಳವಾರ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 3,285 ಜನರನ್ನು ಬಲಿ ತೆಗೆದುಕೊಂಡಿದೆ.

ಇದೇ ಅವಧಿಯಲ್ಲಿ ದೇಶದ ವಿವಿಧೆಡೆ ಒಟ್ಟು 3,62,757 ಜನಕ್ಕೆ ಸೋಂಕು ತಗುಲಿದ್ದು, ದೆಹಲಿ ನಗರ ಒಂದರಲ್ಲೇ ಒಟ್ಟು 381 ಜನ ಸಾವಿಗೀಡಾಗಿದ್ದಾರೆ. ಇದರಿಂದ ನಗರದಲ್ಲಿ ಕಳೆದ ಮಾರ್ಚ್‌ನಿಂದ ಇದುವರೆಗೆ ಸಾವಗೀಡಾದವರ ಸಂಖ್ಯೆ 15,009ಕ್ಕೆ ತಲುಪಿ ದಂತಾಗಿದೆ.

ಸತತ ಎರಡನೇ ವಾರಕ್ಕೆ ಲಾಕ್‌ಡೌನ್‌ ಮುಂದುವರಿದಿರುವ ರಾಷ್ಟ್ರ ರಾಜಧಾನಿಯಲ್ಲಿ 24 ಗಂಟೆಗಳಲ್ಲಿ 24,149 ಜನ ಸೋಂಕಿಗೆ ಒಳಗಾಗಿದ್ದಾರೆ. ಪರೀಕ್ಷೆಗೆ ಒಳಪಟ್ಟಿರುವ 73,811 ಜನರ ಪೈಕಿ ಸೋಂಕು ಪತ್ತೆಯಾಗಿರುವ ಪ್ರಮಾಣ ಶೇ 32.72 ಎಂದು ಆರೋಗ್ಯ ಇಲಾಖೆ ಹೇಳಿದೆ.