Sunday, 15th December 2024

ಕರೋನಾ ವೈರಸ್: ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ

ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ವೈರಸ್ ನ 46,148 ಪ್ರಕರಣಗಳು ಮತ್ತು 979 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ತಿಳಿಸಿದೆ.

ಭಾನುವಾರ 50,040 ಹೊಸ ಸೋಂಕುಗಳು ಮತ್ತು 1258 ಹೊಸ ಸಾವುಗಳನ್ನು ವರದಿ ಮಾಡಿದ್ದು, ಸೋಮವಾರ ಇಳಿಕೆ ಕಂಡು ಬಂದಿದೆ. ಕೋವಿಡ್-19 ಪ್ರಕರಣಗಳ ಸಂಖ್ಯೆ ಪ್ರಸ್ತುತ 30,279,331 ರಷ್ಟಿದೆ ಸಚಿವಾಲಯ ತಿಳಿಸಿದೆ.

58,578 ಜನರನ್ನು ಕಳೆದ 24 ಗಂಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 64,25,893 ಜನರಿಗೆ ವೈರಲ್ ರೋಗದ ವಿರುದ್ಧ ಲಸಿಕೆ ಹಾಕಲಾಯಿತು.