Saturday, 14th December 2024

ಹೆಚ್ಚಿದ ಕರೋನಾ ಸೋಂಕು ಪ್ರಕರಣ: ಪ್ರಧಾನಿ ತುರ್ತು ಸಭೆ

ನವದೆಹಲಿ : ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತುರ್ತು ಸಭೆ ಕರೆಯಲಾಗಿದೆ.

ಕರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ವಿಚಾರ ವಾಗಿ ಪ್ರಧಾನಿ ಮೋದಿ ತುರ್ತು ಸಭೆ ಕರೆದಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ ಸೇರಿ ದೇಶದ ಎಲ್ಲ ರಾಜ್ಯಗಳ ಕರೋನಾ ವೈರಸ್ ಪರಿಸ್ಥಿತಿ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾ ##Unionಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,73,810 ಹೊಸ ಕರೋನ ಪ್ರಕರಣಗಳು, 1,619 ಸಾವುಗಳು ಮತ್ತು 1,44,178 ಮಂದಿ ಕರೋನ ಸೊಂಕಿನಿಂದ ಗುಣಮುಖರಾದವರು ಡಿಸ್ಜಾರ್ಜ್‌ ಆಗಿದ್ದಾರೆ ಎಂದು ವರದಿ ಮಾಡಿದೆ.