Thursday, 12th December 2024

ಕೋವಿಡ್ ಪ್ರಕರಣ: ನಾಲ್ಕನೇ ದಿನವೂ ಲಕ್ಷಕ್ಕಿಂತ ಕಡಿಮೆ

#covid

ನವದೆಹಲಿ: ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ಸತತ ನಾಲ್ಕನೇ ದಿನವೂ ಒಂದು ಲಕ್ಷಕ್ಕಿಂತಲೂ ಕಡಿಮೆ ವರದಿ ಯಾಗಿದೆ. ಶುಕ್ರವಾರ 91,702 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಈ ಮೂಲಕ ಸೋಂಕಿತರ ಸಂಖ್ಯೆ 2,92,74,823ಕ್ಕೆ ಏರಿಕೆಯಾಗಿದ್ದು, ಹೊಸದಾಗಿ 3,403 ಜನರ ಸಾವಿನೊಂದಿಗೆ ಮೃತರ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ. ಸದ್ಯ 11,21,671 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 3.83 ರಷ್ಟಿದೆ. ಕೋವಿಡ್-19 ಚೇತರಿಕೆ ಪ್ರಮಾಣವು ಶೇ 94.93ರಷ್ಟಿದೆ.

ಸತತ 29ನೇ ದಿನವು ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಹೊಸ ಪ್ರಕರಣಗಳಿಗಿಂತಲೂ ಅಧಿಕವಾಗಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 2,77,90,073 ಕ್ಕೆ ಏರಿದೆ.